Paryaya 2018

Palimaru Akki Muhurta

ಅದ್ವಿತೀಯ ಶ್ರೀಕೃಷ್ಣ ಪೂಜಾ ದ್ವಿತೀಯ ಪರ್ಯಾಯ – ಅಕ್ಕಿ ಮುಹೂರ್ತ

ಭಾರತದ ಮೂರು ಪ್ರಮುಖ ವೈಷ್ಣವ ಕ್ಷೇತ್ರಗಳಾದ ಪಂಢರಪುರ, ತಿರುಮಲೆ ಹಾಗು ಉಡುಪಿಗಳು ಕ್ರಮವಾಗಿ ನಾದಬ್ರಹ್ಮ, ಕಾಂಚನಬ್ರಹ್ಮ ಮತ್ತು ಅನ್ನಬ್ರಹ್ಮ ಕ್ಷೇತ್ರಗಳೆಂದು ಪ್ರಸಿದ್ಧವಾಗಿವೆ. ಅನ್ನಬ್ರಹ್ಮನೆನಿಸಿದ ಶ್ರೀಕೃಷ್ಣನು ಮಧ್ವರಿಂದ ಪ್ರತಿಷ್ಠಿತನಾದವನು ಎಂದು ಎಲ್ಲರಿಗೂ ತಿಳಿದಿದೆ. ಅಷ್ಟಯತಿಗಳನ್ನು ನಿಯಮಿಸಿ ಅಷ್ಟಮಠಗಳನ್ನು ಸ್ಥಾಪಿಸಿ ಸರದಿಯ ಪ್ರಕಾರ ಪೂಜೆಗೆ ವ್ಯವಸ್ಥೆಯನ್ನು ಶ್ರೀಮಧ್ವರೇ ಮಾಡಿದ್ದು ಸಹ ತಿಳಿದ ವಿಷಯ. ಈ ವ್ಯವಸ್ಥೆಯು ವಿಶಿಷ್ಟವಾದ ಶಾಸ್ತ್ರಬದ್ಧವಾದ ಆಚರಣೆಗಳಿಂದ ಕೂಡಿದೆ. ಇದುವೇ ಸಂಪ್ರದಾಯ. ಈ ಸಾಂಪ್ರದಾಯಿಕ ನಡೆಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡುವ ಮತ್ತು ಹೊಸ ಆಚರಣೆಗಳನ್ನು ಸೇರಿಸುವ ಅಧಿಕಾರ

ಅದ್ವಿತೀಯ ಶ್ರೀಕೃಷ್ಣ ಪೂಜಾ ದ್ವಿತೀಯ ಪರ್ಯಾಯ – ಅಕ್ಕಿ ಮುಹೂರ್ತ Read More »

Palimaru Bale Muhurta

ಅದ್ವಿತೀಯ ಶ್ರೀಕೃಷ್ಣ ಪೂಜಾ ದ್ವಿತೀಯ ಪರ್ಯಾಯ – ಬಾಳೆ ಮುಹೂರ್ತ

ವಿತ್ರ ಭಾರತಾವನಿಯಲ್ಲಿ ವಿಶಿಷ್ಟಸ್ಥಾನವನ್ನು ಪಡೆದ ಕ್ಷೇತ್ರ – ಉಡುಪಿ. ಶ್ರೀಪರಶುರಾಮದೇವರಿಂದ ನಿರ್ಮಾಣಗೊಂಡ ಇಂದಿನ ಮಹರಾಷ್ಟ್ರದ ಕಲ್ಯಾಣದಿಂದ ಸಹ್ಯಾದ್ರಿತಪ್ಪಲಿನಲ್ಲಿ ಹಬ್ಬಿಕೊಂಡು ಕನ್ಯಾಕುಮಾರಿಯವರೆಗಿನ ಪಡುಗಡಲತಡಿಯ ಕ್ಷೇತ್ರಗಳಲ್ಲಿ ಪ್ರಧಾನವಾದುದು. ಎಂಟುನೂರು ವರ್ಷಗಳ ಹಿಂದೆ “ಶಿವಬೆಳ್ಳಿ” ಎಂದು ಕರೆಯಲ್ಪಟ್ಟಿತ್ತು. ಸಂಸ್ಕೃತದಲ್ಲಿ “ಶಿವರೂಪ್ಯ” ಎಂದು ಪ್ರಸಿದ್ಧವಾಗಿತ್ತು. ಶ್ರೀಮದ್ವಾದಿರಾಜ ಶ್ರೀಮಚ್ಚರಣರು ಉಲ್ಲೇಖಿಸಿದಂತೆ “ಮಹೇಶರಜತ” ಎಂದೂ ಪ್ರಸಿದ್ಧವಾಗಿತ್ತು. ಪೌರಾಣಿಕ ಐತಿಹ್ಯದಂತೆ ಶ್ರೀಪರಶುರಾಮದೇವರು ಸಮುದ್ರರಾಜರಿಂದ ಪಡೆದ ಭೂಭಾಗವನ್ನು ರಾಮಭೋಜ ಎಂಬ ರಾಜನಿಗೆ ನೀಡಿದ್ದರು. ಆ ರಾಮಭೋಜರಾಜನು ಒಂದು ಬಾರಿ “ಅಶ್ವಮೇಧ”ವನ್ನು ಮಾಡುವಾಗ ಶ್ರೀಪರಶುರಾಮದೇವರನ್ನೇ ಅಧ್ವರ್ಯುವನ್ನಾಗಿ ಆಹ್ವಾನಿಸಿದನು. ಆಗಮಿಸಿದ ಶ್ರೀಪರಶುರಾಮದೇವರಿಗೆ

ಅದ್ವಿತೀಯ ಶ್ರೀಕೃಷ್ಣ ಪೂಜಾ ದ್ವಿತೀಯ ಪರ್ಯಾಯ – ಬಾಳೆ ಮುಹೂರ್ತ Read More »