Events

Paranti Brahmha Kalasha Utsava

Brahmakalasha Utsava at Paaranti

ಪಾರಂತಿ ಶ್ರೀಪಂಚಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ- ಮಂತ್ರಾಲಯ ಮಠದ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಪಾರಂತಿಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಗದ್ಗುರುಗಳಾದ “ಶ್ರೀಮನ್ಮಧ್ವಾಚಾರ್ಯರ” ಬಿಂಬಪ್ರತಿಷ್ಠೆ ಮಾಡಿದರು. ಜೊತೆಗೆ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. Paranti Panchalingeshwar temple where Panchroopi Hari ( Vasudeva, Sankarshana, Pradyumna, Aniruddha and Narayana) was installed by Bheemsenadevaru before 5000 years and same temple was renovated by Shree […]

Brahmakalasha Utsava at Paaranti Read More »

Inaugural Function of Panchlingeshwara in Paranthi

ಪಾರಂತಿಯ ಶ್ರೀಪಂಚಲಿಂಗೇಶ್ವರದೇವರ ಪ್ರತಿಷ್ಠಾ ಕಾರ್ಯಕ್ರಮ

ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಕನಸಾದ, ಭೀಮಸೇನದೇವರು ಪ್ರತಿಷ್ಠೆ ಮಾಡಿದ ಐತಿಹಾಸಿಕ ದೇವಾಲಯವಾದ ಪಾರಂತಿಯ ಶ್ರೀಪಂಚಲಿಂಗೇಶ್ವರ ದೇವಾಲಯ ಜೀಣೋದ್ಧಾರಗೊಂಡು ಇಂದು ಬೆಳಿಗ್ಗೆ ಅವರ ಶಿಷ್ಯರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಹಾಗು ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಗರ್ಭಗುಡಿಯಲ್ಲಿ “ಶ್ರೀಪಂಚಲಿಂಗೇಶ್ವರದೇವರ” ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು.                                

ಪಾರಂತಿಯ ಶ್ರೀಪಂಚಲಿಂಗೇಶ್ವರದೇವರ ಪ್ರತಿಷ್ಠಾ ಕಾರ್ಯಕ್ರಮ Read More »

Sahasra Shankha Ksheeraabhisheka at Mysore

ಸಹಸ್ರಶಂಖಕ್ಷೀರಾಭಿಷೇಕ

ಪಲಿಮಾರು ಮಠದ ಪಟ್ಟದ ದೇವರಾದ “ಸೀತಾಂಜನೇಯಲಕ್ಷ್ಮಣಸಮೇತರಾದ ಕೋದಂಡಪಾಣಿ ಶ್ರೀರಾಮಚಂದ್ರದೇವರಿಗೆ” ವಾರ್ಷಿಕವಾಗಿ ನಡೆಯುವ “ಸಹಸ್ರಶಂಖಕ್ಷೀರಾಭಿಷೇಕ” ಇಂದು ಮೈಸೂರು ಟಿ. ನರ್ಸಿಪುರದ ಪವಿತ್ರ ಕ್ಷೇತ್ರವಾದ ಕಾವೇರಿ ತೀರದಲ್ಲಿ ಸೋಸಲೆ ವ್ಯಾಸರಾಜ ಮಠದಲ್ಲಿ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಹಾಗು ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಅಮೃತಹಸ್ತದಿಂದ ನಡೆಯಿತು.                                

ಸಹಸ್ರಶಂಖಕ್ಷೀರಾಭಿಷೇಕ Read More »

Abhinandana by Sri Kaniyur Swamiji

ಅಭಿನಂದನಾ ಸಮರ್ಪಣಾ

ಪರ್ಯಾಯ ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಶ್ರೀಪಾದರ ಅರವತ್ತು ವರ್ಷದ ಪ್ರಯುಕ್ತ ವಿಶೇಷ “ಅಭಿನಂದನಾ ಸಮರ್ಪಣಾ” ಕಾರ್ಯಕ್ರಮವನ್ನು ಉಡುಪಿಯ ರಾಜಾಂಗಣದಲ್ಲಿ ನಡೆಸಿದರು. ಈ ಸಂದರ್ಭದಲ್ಲಿ ಶ್ರೀಪಾದರಿಗೆ “ಮುತ್ತಿನ ಅಭಿಷೇಕ” ಮಾಡಲಾಯಿತು ಹಾಗೆ ಅರವತ್ತು ತುಂಬಿದ ಶ್ರೀಪಾದರಿಗೆ ಅರವತ್ತು ಬಗೆಯ ವಸ್ತುಗಳನ್ನೂ ಸಮರ್ಪಿಸಲಾಯಿತು.

ಅಭಿನಂದನಾ ಸಮರ್ಪಣಾ Read More »

Sri Palimaru Matha - Pranadevara Sannidhi

Sri Vidyamanya Teerthara Aradhana 2015

ವೇದಾಂತ ಸಾಮ್ರಾಜ್ಯದ ದಿಗ್ಗಜರೆನಿಸಿದ, ಶತಮಾನದ ಶಕಪುರುಷರಾದ, ಪರವಿದ್ಯೆಯಿಂದ ಮಾನ್ಯರಾದ, ಪರವಿದ್ಯೆಗೆ ಮಾನಾಯತೆಯನ್ನು ತಂದುಕೊಟ್ಟ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ 15ನೇ ಆರಾಧನೆ ಇಂದು.ಇಡಿಯ ಜೀವನವನ್ನು ಶ್ರೀಮದಾಚಾರ್ಯರ ತತ್ವಸಿದ್ಧಾಂತಕ್ಕೆ ಮಿಸಲಿಟ್ಟವರು..ಮಗುವಿನಂತೆ ಬದುಕಿದವರು.ಹೀಗಿಗಾಗಿಯೇ ಉಡುಪಿಯ ಕೃಷ್ಣ ತನ್ನ ಪೂಜೆಗೆ ಇವರನ್ನು ಕರೆಸಿಕೊಂಡ.ಇವರಿಂದ ಪೂಜೆಗೊಂಡ..ಈ ಚೇತನದ ಬದುಕು ನಮಗೆ ದಾರಿದೀಪವಾಗಲಿ.. Some glimpses from Sri Vidyamanyara Aradhana at Palimaru, Dwadasi, 12th April 2015  

Sri Vidyamanya Teerthara Aradhana 2015 Read More »