ಶ್ರೀಪಲಿಮಾರುಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಶ್ರೀಚೆನ್ನಕೇಶವನ ದಿವ್ಯಸನ್ನಿಧಾನವಾದ ವೇಲಾಪುರಿಯಲ್ಲಿ (ಬೇಲೂರು) 2024ರ ಮೇ 31 ಜೂನ್ 1 ಮತ್ತು 2 ರಂದು ಅವರ 17ನೇ ವರ್ಗದ ಶ್ರೀಮನ್ನ್ಯಾಯಸುಧಾ ಮಂಗಳಮಹೋತ್ಸವವನ್ನು ಆಚರಿಸಲಿದ್ದಾರೆ. ಈ ಸಂದರ್ಭದಲ್ಲಿ, ಶ್ರೀಶ್ರೀಪಾದರು ತಮ್ಮ ಉತ್ತರಾಧಿಕಾರಿಗಳಾದ ಪರಮಪೂಜ್ಯ ಶ್ರೀಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಹಾಗೂ ಸಾವಿರಾರು ಹರಿಭಕ್ತರೊಡನೆ “ಕೇಶವ ಕೀರ್ತನ ಪರಿಕ್ರಮ” ಎಂಬ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಶ್ರೀಪಾದರು, ಪ್ರಪಂಚದ ಎಲ್ಲೆಡೆ ಇರುವ ಆಸ್ತಿಕರ ಮೂಲಕ, 24 ಲಕ್ಷ ಬಾರಿ ಭಗವಂತನ ಕೇಶವಾದಿ 24 ರೂಪಗಳ ಚಿಂತನೆಯೊಂದಿಗೆ ಭಕ್ತ ಕನಕದಾಸರ ಪ್ರಸಿದ್ಧ ಕೇಶವನಾಮ ಸಂಕೀರ್ತನದ ಪಾರಾಯಣವನ್ನು ಮಾಡಿಸಿ, ಸಮಷ್ಟಿಯಾಗಿ ನಡೆದ ಈ ಮಹೋನ್ನತವಾದ ಪಾರಾಯಣಯಜ್ಞವನ್ನು ಶ್ರೀಬೇಲೂರು ಚೆನ್ನಕೇಶವದೇವರಿಗೆ 24 ಪ್ರದಕ್ಷಿಣೆ ಸಲ್ಲಿಸುತ್ತಾ ಮಾಡಲಿದ್ದಾರೆ. ಇದುವೆ ಕೇಶವಕೀರ್ತನಪರಿಕ್ರಮ.
ತಾ: 1 ಜೂನ್ 2024 : ಪಾರಾಯಣಮಹಾಯಜ್ಞ
ತಾ: 2 ಜೂನ್ 2024: ಕೇಶವನಾಮಸಂಕೀರ್ತನಪರಿಕ್ರಮ :
ಉಪಸ್ಥಿತ ಪರಮ ಪೂಜ್ಯ ಶ್ರೀಪಾದಂಗಳವರ ನೇತೃತ್ವದಲ್ಲಿ ಕೇಶವನಾಮ ಸಂಕೀರ್ತನೆಯೊಂದಿಗೆ ಚೆನ್ನಕೇಶವನ ದೇವಾಲಯಕ್ಕೆ 24 ಪ್ರದಕ್ಷಣೆ ಹಾಕುವುದರ ಮೂಲಕ ಭಕ್ತ ಸಮುದಾಯವು ಯಥಾಶಕ್ತಿ ನೆರವೇರಿಸಿದ ಕೇಶವನಾಮ ಪಾರಾಯಣದ ಸಮರ್ಪಣೆ.
ಆಸ್ತಿಕರೆಲ್ಲರೂ ಭಾಗವಹಿಸಬಹುದು : ಭಕ್ತಾದಿಗಳು ತಮ್ಮ ಮನೆಗಳಲ್ಲಿಯೇ ನಿತ್ಯವೂ ಯಥಾಶಕ್ತಿ ಪಾರಾಯಣ ಮಾಡುತ್ತಾ ಪಾರಾಯಣಯಜ್ಞದಲ್ಲಿ ಪಾಲ್ಗೊಳ್ಳಬಹುದು. ಬೇಲೂರಿನ ಶ್ರೀಚೆನ್ನಕೇಶವರಾಯನ ಪ್ರದಕ್ಷಿಣೆಯ ಮಹಾಅವಬೃಥದಲ್ಲಿಯೂ ಪಾಲ್ಗೊಳ್ಳಲು ಎಲ್ಲರಿಗೂ ಸ್ವಾಗತವಿದೆ. ನಾವೂ ಪಾಲ್ಗೊಳ್ಳೋಣ. ನಮ್ಮವರನ್ನು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸೋಣ. ಗುರುಗಳ ಅಂತರ್ಗತ ಪ್ರಾಣಸ್ಥ ಶ್ರೀಚನ್ನಕೇಶವನಿಗೆ ನಾಮ ಸಂಕೀರ್ತನೆಯ ಪುಷ್ಪಾಂಜಲಿಯನ್ನು ಸಮರ್ಪಿಸೋಣ. ದೊರೆತಿರುವ ಸದವಕಾಶದ ಸದುಪಯೋಗ ಮಾಡಿಕೊಳ್ಳೋಣ
ಪಾರಾಯಣದಲ್ಲಿ ಭಾಗವಹಿಸುವ ಭಕ್ತರು ಇಲ್ಲಿ ತಮ್ಮ ವಿವರಗಳನ್ನು ದಾಖಲಿಸಬೇಕಾಗಿ ಕೋರಿಕೆ. (ಒಂದು ಬಾರಿ ಮಾತ್ರ )
- https://forms.gle/bxnvb6VTrm3TDE1j9
ನಿತ್ಯ ಮಾಡಿದ ಪಾರಾಯಣ ಸಂಖ್ಯೆಯನ್ನು ಇಲ್ಲಿ ದಾಖಲಿಸಿ
- https://forms.gle/sEBxWYaps22cadVKA
ಪಾರಾಯಣ ಯಜ್ಞದಲ್ಲಿ ಭಾಗಿಯಾಗಬಯಸುವ ಆಸ್ತಿಕ ಬಾಂಧವರು ತಮ್ಮ ಹೆಸರು, ಗೋತ್ರ ನಕ್ಷತ್ರಗಳ ವಿವರವನ್ನು ಕೆಳಗೆ ನೀಡಲಾಗಿರುವ ದೂರವಾಣಿ ಸಂಖ್ಯೆಗೆ ವಾಟ್ಸಪ್ ಸಂದೇಶದ ಮೂಲಕ ತಿಳಿಸಲು ಕೋರಲಾಗಿದೆ.
- 86605 46503 / 93424 31914
ವಿವರ ನೀಡಲು ಕೊನೆಯ ದಿನಾಂಕ ಮೇ 30 2024.
ಕೇಶವನಾಮ ಸಾಹಿತ್ಯ : https://sripalimarumatha.org/2024/02/keshavanama/
10