Sri Vidyamanya Teertharu

ಶ್ರೀವಿದ್ಯಾಮಾನ್ಯರು ನಮ್ಮ ಮನೆಯ ಆಧ್ಯಾತ್ಮ ದೀಪವನ್ನು ಹಚ್ಚಿದವರು

ಪ್ರಸಿದ್ಧ ವಿದ್ವಾಂಸರಾದ ಶ್ರೀ ತಾಮ್ರಪರ್ಣೀ ರಾಘವೇಂದ್ರಾಚಾರ್ಯರ ಹರಿಗುರುಗಳ ಸೇವೆಯನ್ನು ಗಮನಿಸಿ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಪ್ರಥಮ ಪರ್ಯಾಯದ ಸಂದರ್ಭದಲ್ಲಿ “ಪರವಿದ್ಯಾ ಪ್ರವೀಣ” ಎಂದು ಪ್ರಶಸ್ತಿ ನೀಡಿ ಸಂಮಾನಿಸಿ ಗೌರವಿಸಿದ ಸಂದರ್ಭದಲ್ಲಿ ಹೇಳಿದ ಮಾತಿದು.

ಪ್ರಸಿದ್ಧ ವಿದ್ವಾಂಸರಾದ  ಶ್ರೀ  ತಾಮ್ರಪರ್ಣೀ ರಾಘವೇಂದ್ರಾಚಾರ್ಯರ ಹರಿಗುರುಗಳ ಸೇವೆಯನ್ನು ಗಮನಿಸಿ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಪ್ರಥಮ ಪರ್ಯಾಯದ ಸಂದರ್ಭದಲ್ಲಿ “ಪರವಿದ್ಯಾ ಪ್ರವೀಣ” ಎಂದು ಪ್ರಶಸ್ತಿ ನೀಡಿ ಸಂಮಾನಿಸಿ ಗೌರವಿಸಿದ ಸಂದರ್ಭದಲ್ಲಿ ಹೇಳಿದ ಮಾತಿದು.

ಭಂಡಾರಕೇರಿ ಮಠಾಧೀಶರಾಗಿದ್ದಾಗ ಶ್ರೀಶ್ರೀವಿದ್ಯಾಮಾನ್ಯತೀಥರು ೧೯೩೯ರಲ್ಲಿ ಕೊಯಂಬತ್ತೂರಿಗೆ ಆಗಮಿಸಿದಾಗ ನಮ್ಮ ಮನೆಯಲ್ಲಿಯೇ ವಾಸ್ತವ್ಯ ಹೂಡಿದ್ದು ನಮ್ಮ ತಂದೆಯವರಾದ ಶ್ರೀ ತಾಮ್ರಪರ್ಣೀ ಸುಬ್ಬಾಚಾರ್ಯರಿಗೆ ಮಾಯಾವಾದ ಖಂಡನ, ಉಪಾಧಿಖಂಡನ, ಪ್ರಪಂಚ ಮಿಥ್ಯಾತ್ವಾನುಮಾನ ಖಂಡನ – ಹೀಗೆ ಖಂಡನತ್ರಯಗಳನ್ನು ಪಾಠ ಹೇಳಿದರು. ಆಗ ನಮ್ಮ ತಂದೆಯ ಪ್ರತಿಭೆ ಮತ್ತು ನಿಷ್ಠೆಯನ್ನು ಗಮನಿಸಿ ತಮ್ಮ ಶಿಷ್ಯರಾದ ಶ್ರೀವಾದಿರಾಜಾಚಾರ್ಯರ ಸಂಪರ್ಕ ಹಚ್ಚಿ ಮುಂದೆ ಶ್ರೀವಾದಿರಾಜಾಚಾರ್ಯರ ಮೂಲಕ ಪಾಠ ಪ್ರವಚನ ನಡೆಯುವುದಕ್ಕೆ ಬೇಕಾದ ಭದ್ರ ಬುನಾದಿಯನ್ನು ಸ್ಥಾಪಿಸಿದರು. ಶ್ರೀವಾದಿರಾಜಾಚಾರ್ಯರು ಒಂದು ವರ್ಷಕಾಲ ನಮ್ಮ ಮನೆಯಲ್ಲಿಯೇ ಇದ್ದು ನಮ್ಮ ತಂದೆಯವರಿಗೆ ಸಚ್ಛಾಸ್ತ್ರವನ್ನು ಪಾಠ ಮಾಡಿದರು.

ಹೀಗೆ ನಮ್ಮಲ್ಲಿ ಆಧ್ಯಾತ್ಮಿಕ ವಿದ್ಯೆ ಬೆಳಗಿದ್ದೇ ಶ್ರೀ ವಿದ್ಯಾಮಾನ್ಯತೀರ್ಥರಿಂದಾಗಿ, ಎಂಬುದಕ್ಕಾಗಿದೆ ಶ್ರೀರಂಗದಲ್ಲಿ ೧೯೩೭ರಿಂದ ಪ್ರಾರಂಭವಾಗಿ ೭೧ವರ್ಷಗಳಲ್ಲಿ ನಡೆಯುತ್ತಾ ಬಂದಿರುವ ಶ್ರೀಮಧ್ವನಾಥ ಸಭೆಯ ಪ್ರತಿಯೊಂದು ಅಧಿವೇಶನದ ಕೊನೆಯಲ್ಲಿಯೂ ಶ್ರೀವಿದ್ಯಾಮಾನ್ಯರ ಪುಣ್ಯಸ್ಮರಣೆಯನ್ನು ಮಾಡಲು ನಾವು ಮರೆಯುವುದಿಲ್ಲ.

Sri Tamraparni Subbachar
ಶ್ರೀ ತಾಮ್ರಪರ್ಣೀ ಸುಬ್ಬಾಚಾರ್

ಈ ಲೇಖನವನ್ನು ಏಪ್ರಿಲ್ ೨೦೦೨ರ ಶ್ರೀಸರ್ವಮೂಲಪತ್ರಿಕೆಯಿಂದ ಆಕರಿಸಲಾಗಿದೆ.

ಶ್ರೀಸುಬ್ಬಾಚಾರ್ಯರ ಚಿತ್ರದ ಕೃಪೆ : http://dvsubbachar.blogspot.in/2009/02/life-of-shri-subbachar.html

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.