ಲೇಖನ : ಕೃಷ್ಣಸಖ
ಕ್ಷಮೆ ನೀಡುವವರಲ್ಲಿ ಒಂದೇ ಒಂದು ದೋಷ. ಅದೇನೆಂದರೆ, “ಪ್ರಾಯಃ ಈತ ಕೈಲಾಗದವನಿರಬೇಕು ಅದಕ್ಕೆ ಎಲ್ಲವನ್ನು ಸಹಿಸಿಕೊಳ್ಳುತ್ತಾನೆ” ಎಂದು ಜನ ತಪ್ಪು ತಿಳಿಯುತ್ತಾರೆ ಎನ್ನುವುದು.
“ಏಕಃ ಕ್ಷಮವತಾಂ ದೋಷಃ ದ್ವಿತೀಯೋ ನೋಪಪದ್ಯತೇ. |
ಯದೇನಂ ಕ್ಷಮಯಾ ಯುಕ್ತಂ ಅಶಕ್ತಂ ಮನ್ಯತೇ ಜನಃ” ||
– ( ಭಾರತ-ವಿದುರನೀತಿ )
ಕ್ಷಮೆಯಿಂದ ಎಲ್ಲವನ್ನೂ ಗೆಲ್ಲುವುದು ಹೌದಾದರೂ ಜನ ಕ್ಷಮಾಶೀಲನನ್ನು ದುರುಪಯೋಗಿಸಿಕೊಳ್ಳುವುದೇ ಹೆಚ್ಚು. “ನೋಡು ಧೃತರಾಷ್ಟ್ರ ಪಾಂಡವರಿಗೆ ಸಲ್ಲಬೇಕಾದ ಅಧಿಕಾರವನ್ನು ನೀಡಿಬಿಡು. ಅವರಿಗೇನೂ ಮಾಡಿದರೂ ಸಹಿಸಿಕೊಂಡು ನಿನ್ನನ್ನು, ನಿನ್ನ ಮಕ್ಕಳನ್ನು ಕ್ಷಮಿಸುವುದು ಅವರ ದೊಡ್ಡತನ. ಅವರಲ್ಲಿರುವ ಕ್ಷಮಾ ಗುಣವನ್ನು ನೀನು ಮತ್ತು ನಿನ್ನ ಮಕ್ಕಳು ತಪ್ಪು ತಿಳಿದಿರುವಿರಿ. ಅವರೆಂದಿಗೂ ಕೈಲಾಗದವರಲ್ಲ. ಹೀಗೆಯೇ ನೀವು ಮುಂದುವರಿದರೆ ನಿಮ್ಮ ಬದುಕು ದುರಂತದಲ್ಲಿ ಕೊನೆಗೊಳ್ಳುವುದು ಸತ್ಯ. ಇದನ್ನು ಅರ್ಥೈಸಿಕೊಂಡು ಅವರಿಗೆ ಸಲ್ಲಬೇಕಾದ ಪಾಲನ್ನು ಅವರಿಗೆ ನೀಡಿಬಿಡು” ಎನ್ನುವ ಸಂದೇಶವನ್ನು ನೀತಿ ಭೋಧಿಸುವ ಮೂಲಕ ತಿಳಿಸಿರುವನು. ವಿದುರ ಇಷ್ಟು ಹೇಳಿಯೂ ಕೇಳದೇ ಇದ್ದುದರಿಂದ ಅವರ ಬದುಕು ದುರಂತದಲ್ಲೇ ಕೊನೆಗೊಂಡಿತು.
ಕ್ಷಮಿಸುವ ಎಲ್ಲರನ್ನೂ ತಪ್ಪಾಗಿ ತಿಳಿಯಬಾರದು.
ವಿದುರ ಮತ್ತು ಧೃತರಾಷ್ಟ್ರನ ಚಿತ್ರದ ಕೃಪೆ: ವಿಕಿಮಿಡಿಯಾ