ವಸುದೇವರಾಗಬಲ್ಲೆವೆ?
ಶ್ರೀಕೃಷ್ಣನು ವಸುದೇವನ ಮನೆಯಲ್ಲಿ ಅವತರಿಸುವನು ಎನ್ನುವ ಚತುರ್ಮುಖನ ಮಾತನ್ನು ಭಾಗವತ ಉಲ್ಲೇಖಿಸಿದೆ. ವಸುದೇವಗೃಹೇ ಸಾಕ್ಷಾದ್ ಭಗವಾನ್ ಪುರುಷಃ ಪರಃ ಜನಿಷ್ಯತೇ ಎನ್ನುವುದಾಗಿ ಆ ಮಾತು. ವ್ಯಾಸರ ಈ ವಾಕ್ಯವನ್ನು ನೋಡಿದಾಗ ಸಹಜವಾಗಿಯೇ ಅರ್ಥವಾಗುವುದು ಗೃಹ ಎಂದರೆ ಮನೆ ಎನ್ನುವ ಅರ್ಥ. ವಸುದೇವನ ಮನೆಯಲ್ಲಿ ಕೃಷ್ಣಾವತಾರ ಎಂದು. ಇಷ್ಟೇ ಅಲ್ಲದೇ ‘ಗೃಹ ಶಬ್ದವನ್ನು ಮನೆಯನ್ನು ಮುನ್ನಡೆಸುವ ಮಡದಿಯಲ್ಲೂ ಪ್ರಯೋಗಿಸುವುದಿದೆ. ಗೃಹಿಣೀ ಗೃಹಮುಚ್ಯತೇ ಎನ್ನುವ ಪ್ರಾಚೀನರ ಮಾತೇ ಇದಕ್ಕೆ ಸಾಕ್ಷಿ. ಹಾಗಾಗಿ ವಸುದೇವನ ಗೃಹದಲ್ಲಿ ಅಂದರೆ ಅವನ ಮಡದಿಯಾದ ದೇವಕಿಯಲ್ಲಿ […]