Sri Vidyesha Teertharu

೮. ಶ್ರೀ ವಿದ್ಯೇಶ ತೀರ್ಥ ಶ್ರೀಪಾದಂಗಳವರು

8. Shri Vidyesha Teertha Sripadaru

ಈ ಪರಂಪರೆಯಲ್ಲಿ ಎಂಟನೆಯ ಯತಿಗಳೇ ಶ್ರೀ ವಿದ್ಯೇಶತೀರ್ಥರು. ಇವರು ಪರಂಪರೆಯಿಂದ ಬಂದ ಸಿದ್ಧಾಂತದ ತತ್ವಗಳನ್ನು ಮುಂದಿನ ಪೀಳಿಗೆಗೆ ಮುಟ್ಟಿಸಿದವರು. ಭಕ್ತಿಯಿಂದ ಶ್ರೀರಾಮನ ಆರಾಧನೆಯನ್ನು ನಡೆಸಿದವರು. ಸುಮಾರು ನಲವತ್ತೇಳು ವರ್ಷಗಳ ಕಾಲ ಪೀಠಾಧಿಪತಿಗಳಾಗಿದ್ದು ದೇಶದ ಎಲ್ಲಾ ಕ್ಷೇತ್ರಗಳನ್ನು ಸಂದರ್ಶಿಸಿದವರು. ತಮ್ಮ ಕೊನೆಯ ಕಾಲದಲ್ಲಿ ರಾಮೇಶ್ವರ ಕ್ಷೇತ್ರಕ್ಕೆ ಹೋಗಿ ಸಾಧನೆ ನಡೆಸಿದವರು. ಶಾಲಿವಾಹನಶಕೆ ೧೩೫೬ (ಕ್ರಿ.ಶ-೧೪೩೩) ಪ್ರಮಾಥಿ ನಾಮ ಸಂವತ್ಸರದ ಶ್ರಾವಣ ಶುದ್ಧ ಸಪ್ತಮಿಯಂದು ರಾಮೇಶ್ವರದಲ್ಲಿ ರಾಮನಾಥನ ಪಾದವನ್ನು ಸೇರಿದರು.

The 8th seer in this lineage is Shri Vidyesha Teertha. He passed on the traditional philosophical truths to the next generation. He worshipped Shri Rama with devotion. He served as peetadhipati for about 47 years and visited all sacred places. In his final days, he visited Rameshwara and performed his sadhana. In Shalivahana shaka 1356 (1433 A.D.) Pramaathi nama samvatsara shravana shuddha saptami he attained the feet of Ramanaatha at Rameshwara.