13. ಶ್ರೀ ಸುರೇಶತೀರ್ಥರು
13. Shri Suresha Teertharu
ಮಠದ ಪರಂಪರೆಯಲ್ಲಿ ಇವರು ಹದಿಮೂರನೆಯ ಯತಿವರ್ಯರು. ಬ್ರಾಹ್ಮಣ ಶರೀರ ಕಠಿಣ ತಪಶ್ಚರ್ಯೆಗೆ ಇರುವಂತಹದ್ದು. ಕೇವಲ ಕ್ಷುದ್ರಕಾಮನೆಗಳ ಭೋಗಕ್ಕೆ ಅಲ್ಲ ಎನ್ನುವ ಶಾಸ್ತ್ರದ ವಚನವನ್ನು ಅಕ್ಷರಶಃ ಪಾಲಿಸಿದ ಮಹಾಜ್ಞಾನಿಗಳು ಶ್ರೀಸುರೇಶ ತೀರ್ಥರು. ಕಾಷ್ಠಮೌನದಂತಹ ಕಠಿಣವ್ರತಗಳನ್ನು ಆಚರಿಸುವುದರಲ್ಲಿಯೇ ತಮ್ಮ ಜೀವನವನ್ನು ಕಳೆದವರು.
ಉಡುಪಿಯಲ್ಲಿ ಎರಡು ತಿಂಗಳುಗಳ ಕಾಲ ಇದ್ದ ಪರ್ಯಾಯದ ಅವಧಿಯನ್ನು ಎರಡು ವರ್ಷಗಳಿಗೆ ವಿಸ್ತಾರಮಾಡಿದವರು ಶ್ರೀವಾದಿರಾಜಗುರುಸಾರ್ವಭೌಮರು. ಎರಡು ವರ್ಷದ ಪರ್ಯಾಯವನ್ನು ಶುರುಮಾಡಿದ್ದು ಪಲಿಮಾರುಮಠದಿಂದ, ಕ್ರಿ.ಶ-೧೫೨೨ರಲ್ಲಿ. ಆಗ ಪಲಿಮಾರುಮಠದ ಪೀಠಾಧಿಪತಿಗಳಾಗಿದ್ದವರು ಶ್ರೀ ಸುರೇಶತೀರ್ಥರು. ಆ ಕಾರಣದಿಂದ ಎರಡು ವರ್ಷಗಳ ಪರ್ಯಾಯವ್ಯವಸ್ಥೆಯ ಪ್ರಥಮಸರ್ವಜ್ಞಪೀಠಾರೂಢರಾದ ಹೆಗ್ಗಳಿಕೆ ಶ್ರೀ ಸುರೇಶತೀರ್ಥರಿಗೆ ಸಲ್ಲುತ್ತದೆ.
ಇವರು ತಮ್ಮ ಜೀವನದ ಬಹುಭಾಗವನ್ನು ಹಳ್ಳಿಯ ಮಠದಲ್ಲಿಯೇ ಕಳೆದವರು. ಹೀಗೆ ಹದಿನಾರು ವರ್ಷಗಳ ಕಾಲ ಪೀಠಾಧಿಪತಿಗಳಾಗಿದ್ದು ರಾಮಚಂದ್ರನ ಸೇವೆಯನ್ನು ಮಾಡಿ, ಶಾಲಿವಾಹನಶಕ ೧೪೫೨ (ಕ್ರಿ.ಶ-೧೫೩೯) ವಿರೋಧಿಸಂವತ್ಸರದ ಜ್ಯೇಷ್ಠಬಹುಳ ಪಂಚಮಿಯಂದು ಪಲಿಮಾರಿನ ಮಠದಲ್ಲಿಯೇ ವೃಂದಾವನಸ್ಥರಾದರು.
He is the thirteenth seer in the lineage of the matha. Shri Suresha Teertha is a luminary who abided by every word of the shastric order that states that the body of a brahmin is meant for rigorous asceticism but not for the enjoyment of trifle desires. He spent his life observing difficult vows such as the kaashtamauna (refraining from speech including communication through sign language).
The two month paryaya tenure at Udupi was extended to a period of two years by Shri Vadiraja Gurusaarvabhouma. The two year paryaya cycle was begun with Palimaru Matha in 1522 A.D. The peetadhipati of Palimaru Matha at the time was Shri Suresha Teertha. In this way, Sri Suresha Teertha is credited with the eminence of being the first to ascend the sarvajna peeta under the two year paryaya cycle.
He spent a major part of his life at the matha in the village.Thus, serving as peetadhipati for 16 years, serving Lord Ramachandra, in Shalivahana shaka 1452 (1539 A.D.) Virodhi samvatsara jyeshta bahula panchami, he attained vrindavana at Palimaru Matha.