11. ಶ್ರೀ ರಾಮಚಂದ್ರತೀರ್ಥರು.
11. Shri Ramachandra Teertharu
ಪಲಿಮಾರು ಮಠದ ಗುರು ಪೀಳಿಗೆಯಲ್ಲಿ ಹನ್ನೊಂದನೆಯವರು ಶ್ರೀರಾಮಚಂದ್ರ ತೀರ್ಥರು. ವಾದದಲ್ಲಿ ಪ್ರತಿವಾದಿಗಳನ್ನು ಸೋಲಿಸಿ ಮಧ್ವಸಿದ್ಧಾಂತದ ವಿಜಯಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಘನವಿದ್ವಾಂಸರು ಶ್ರೀರಾಮಚಂದ್ರತೀರ್ಥರು. ಮಧ್ವಪರಂಪರೆಯಲ್ಲಿ ಕ್ರಾಂತಿಯನ್ನು ಮಾಡಿದ ಪ್ರಕಾಂಡ ಪಂಡಿತರೆನಿಸಿದ ಶ್ರೀವ್ಯಾಸರಾಜರು,ಶ್ರೀವಾದಿರಾಜರು, ಶ್ರೀವಿಜಯೀಂದ್ರರ ಸಮಕಾಲೀನರಿವರು. ಸುಮಾರು ಇಪ್ಪತ್ತು ವರ್ಷಗಳ ಕಾಲ ಪೀಠದಲ್ಲಿ ವಿರಾಜಿಸಿದವರು. ಶ್ರೀ ನಾರಾಯಣ ತೀರ್ಥರೆಂಬುವವರಿಗೆ ಆಶ್ರಮನೀಡಿ ಗೌಡಸಾರಸ್ವತರ ಶ್ರೀಗೋಕರ್ಣಪರ್ತಗಾಳಿ ಜೀವೋತ್ತಮ ಮಠದ ಪ್ರವರ್ತನೆಗೆ ಕಾರಣರಾದವರು. ಈ ಮಹಾನುಭಾವರು ಶಾಲಿವಾಹನಶಕ ೧೪೨೪ (ಕ್ರಿ.ಶ- ೧೫೦೨) ದುರ್ಮುಖ ಸಂವತ್ಸರದ ಕಾರ್ತಿಕ ಬಹುಳ ಚತುರ್ದಶಿಯಂದು ಭೀಮರಥೀ ತೀರದ ಪಂಢರಾಪುರದಲ್ಲಿ ಪಾಂಡುರಂಗನ ಪಾದವನ್ನು ಸೇರಿದರು.
The eleventh seer in the lineage of gurus of Palimaru Matha is Shri Ramachandra Teertha. He is the eminent scholar who launched the victory flag of Madhva philosophy sky-high by winning over his opponents in debates. He is a contemporary of profound savants such as Shri Vyaasaraja. Shri Vaadiraja and Shri Vijayeendra who revolutionised the Madhva tradition. He adorned the peeta for about 20 years. He was instrumental in the establishment Shri Gokarna Partagaali Jeevottama Matha of the gouda saraswat community and appointed Shri Narayana Teertha as the pontiff. This noble seer attained the feet of Paanduranga in Shalivaahana shaka 1424 (1502 A.D.) Durmukha samvatsara karteeka bahula chaturdashi at Pandarapura along the banks of Bhimarathi.