The eighteenth seer in the lineage is Shri Raghunatha Teertha.He is an eminent seeker who lead his life practicing extremely difficult devout austerities.The paryaya of Shri Raghunatha Teertha was hailed as the most festive paryaya of the time.
ಪರಂಪರೆಯಲ್ಲಿ ಹದಿನೆಂಟನೆಯ ಯತಿಗಳು ಶ್ರೀ ರಘುನಾಥತೀರ್ಥರು. ಇವರು ಅತ್ಯಂತಕಠಿಣವಾದ ತಪಸ್ವಿ ಜೀವನವನ್ನು ನಡೆಸಿದ ಸಾಧಕೋತ್ತಮರು. ಅತ್ಯಂತ ಸಂಭ್ರಮದ ಪರ್ಯಾಯವೆಂದರೆ ಶ್ರೀರಘುನಾಥತೀರ್ಥರ ಪರ್ಯಾಯವೆಂದು ಆ ಕಾಲದಲ್ಲಿ ಪ್ರಸಿದ್ಧಿ ಇತ್ತು.
ಶ್ರೀ ಹೃಷೀಕೇಶತೀರ್ಥರ ಪೀಠವನ್ನು ಇವರು ಸುಮಾರು ಮೂವತ್ತೆರಡು ವರ್ಷಗಳ ಕಾಲ ಅಲಂಕರಿಸಿದ್ದರು.
ತನ್ನ ಕೊನೆಯ ದಿನಗಳಲ್ಲಿ ದೇಶಸಂಚಾರದಲ್ಲಿದ್ದ ಶ್ರೀ ರಘುನಾಥತೀರ್ಥರು ಶಾಲಿವಾಹನ ಶಕ ೧೫೪೭(ಕ್ರಿ.ಶ-೧೬೨೪) ರಕ್ತಾಕ್ಷಿಸಂವತ್ಸರದ ಚೈತ್ರ ಶುದ್ಧ ನವಮಿಯಂದು ತನ್ನ ಉಪಾಸ್ಯಮೂರ್ತಿಯಾದ ಶ್ರೀರಾಮಚಂದ್ರನು ಅವತಾರ ಮಾಡಿದ ಪರ್ವದಿನದಂದು ರಾಮನನ್ನು ಅರ್ಚಿಸಿ, ಮೆಚ್ಚಿಸಿ ದ್ವಾರಕಾಕ್ಷೇತ್ರದಲ್ಲಿ ತ್ರಿವಿಕ್ರಮ ಶ್ರೀಕೃಷ್ಣನ ಪಾದವನ್ನು ಸೇರಿದರು.
The eighteenth seer in the lineage is Shri Raghunatha Teertha.He is an eminent seeker who lead his life practicing extremely difficult devout austerities.The paryaya of Shri Raghunatha Teertha was hailed as the most festive paryaya of the time.
He adorned the peeta of Shri Hrishikesha Teertha for a period of 32 years.
Shri Raghunatha Teertha was touring the country during his final days. In Shalivahana shaka 1547 (1624 A.D.) Raktaakshi samvatsara chaitra shuddha navami – the auspicious day that his adored Lord Shri Ramachandra incarnated, he worshipped Lord Rama, pleased Him and attained the feet of Trivikrama Shri Krishna at Dwaraka.