2. ಶ್ರೀಸಮಾತ್ಮೇಶತೀರ್ಥರು
2. Shri Samaatmesha Teertha
ಪಲಿಮಾರುಮಠದ ಪರಂಪರೆಯನ್ನು ಬೆಳಗಿದ ಇನ್ನೋರ್ವ ಮಹಾನ್ ಚೇತನ ಎರಡನೆಯ ಯತಿಗಳಾದ ಶ್ರೀಸಮಾತ್ಮೇಶ ತೀರ್ಥರು. ಶ್ರೀಮದಾಚಾರ್ಯರ ಪ್ರಿಯಶಿಷ್ಯರಾದ ಶ್ರೀಹೃಷೀಕೇಶತೀರ್ಥರಿಂದ ತುರೀಯಾಶ್ರಮವನ್ನು ಸ್ವೀಕಾರಮಾಡುವ ಮಹಾನ್ ಭಾಗ್ಯ ಇವರಿಗೆ ದೊರಕಿತು. ಶ್ರೀಹೃಷೀಕೇಶತೀರ್ಥರು ಇವರಿಗೆ ’ಶ್ರೀಸಮಾತ್ಮೇಶ’ ಎಂಬುದಾಗಿ ನಾಮಕರಣ ಮಾಡಿದರು. ಸಮಾತ್ಮಾ ಎನ್ನುವುದು ಭಗವಂತನ ಸಹಸ್ರನಾಮಗಳಲ್ಲಿ ಒಂದು. ಸಮಾತ್ಮಾ ಅಂದರೆ ಎಲ್ಲಾರೂಪಗಳಲ್ಲೂ ಏಕರೂಪನು. ಎಲ್ಲಾ ಜೀವರನ್ನು ಸಮನಾಗಿ ಕಾಣುವವನು ಎಂದರ್ಥ.
ಈ ಸಮಾತ್ಮಾ ಎಂಬ ನಾಮಕ್ಕೆ ಶ್ರೀಹೃಷೀಕೇಶತೀರ್ಥರು ತಮ್ಮ ಹೆಸರಿನ ಈಶ ಪದವನ್ನು ಸೇರಿಸಿ ಶ್ರೀಸಮಾತ್ಮೇಶ ಎಂಬುದಾಗಿ ಹೆಸರಿಟ್ಟರು. ಸಮಾತ್ಮನಾದ ಭಗವಂತ ಇವರಿಗೆ ಈಶನಾದ್ದರಿಂದ ಇವರು ಶ್ರೀಸಮಾತ್ಮೇಶರಾದರು. ಎಲ್ಲೆಡೆಯಲ್ಲಿಯೂ ಸಮದೃಷ್ಟಿಯನ್ನು ಹೊಂದಿದ ಜ್ಞಾನಿಗಳಾದ ಸಮಾತ್ಮರಾದ ಈ ಸಾಧಕರಿಗೆ ಭಗವಂತ ಈಶ. ಹೀಗೆ ಎರಡರ್ಥದಲ್ಲಿಯೂ ಇವರ ಹೆಸರು ಅನ್ವರ್ಥವಾಯಿತು. ಇವರು ತಮ್ಮ ಗುರುಗಳಾದ ಶ್ರೀಹೃಷೀಕೇಶತೀರ್ಥರಂತೆ ಪೂರ್ಣ ಅಂತರ್ಮುಖಿಗಳಾಗಿ ಭಗವಂತನನ್ನು ಧ್ಯಾನಿಸುತ್ತಾ ಸಾರ್ಥಕಜೀವನವನ್ನು ನಡೆಸಿ ಪರಾಭವಸಂವತ್ಸರದ ಶ್ರಾವಣ ಶುಕ್ಲ ಬಿದಿಗೆಯಂದು ಕೃಷ್ಣಾನದೀತೀರದಲ್ಲಿ ಶ್ರೀಕೃಷ್ಣನ ಪಾದವನ್ನು ಸೇರಿದರು.
Another great soul who illuminated the legacy of Palimaru Matha is the second seer in the lineage, Shri Samaatmesha Teertha. He had the great privelege of getting initiatied into sainthood by Shrimadacharya’s dear disciple Shri Hrishikesha Teertha. Shri Hrishikesha Teertha named him ‘Shri Samaateshma’. Samaateshma is one of the thousand names of the Lord. Samaatma means the same in all forms. One who sees all beings as equal.
To this name of Samaatma, Shri Hrishikesha Teertha added the word esha from his name and called him Shri Samaatmesha. Since the equitable Lord is his master, he came to be called Shri Samaatmesha. To this noble knowledgeable seeker with an equitable view everywhere, the Lord is his ruler. Thus in both ways, his name was meaningful. Like his guru Shri Hrishikesha Teertha, he too completely turned inwards, meditating upon the Lord and lead a life of asceticism. In Paraabhava samvatsara, shravana shukla bidige, he attained the lotus feet of Shri Krishna at the banks of the Krishna river.