17. ಶ್ರೀ ರಘುಪತಿ ತೀರ್ಥರು
17. Shri Raghupati Teertha
ಶ್ರೀ ಹೃಷೀಕೇಶತೀರ್ಥರ ಸತ್ಪರಂಪರೆಯಲ್ಲಿ ಬಂದ ಹದಿನೇಳನೆಯ ಯತಿಪುಂಗವರು ಶ್ರೀ ರಘುಪತಿ ತೀರ್ಥರು. ಇವರು ಶ್ರೀಮನ್ನ್ಯಾಯಸುಧಾಮಂಗಳವನ್ನು ೬ ಬಾರಿ ನೆರವೇರಿಸಿದ ದಾಖಲೆ ಮಠದಲ್ಲಿದೆ. ಶ್ರೀವಾದಿರಾಜರ ಕಾಲದ ವಿದ್ವನ್ಮಣಿಯತಿಗಳ ಪಟ್ಟಿಯಲ್ಲಿ ಇವರ ಹೆಸರೂ ಕೂಡಾ ಪ್ರಮುಖಸ್ಥಾನವನ್ನು ಪಡೆದಿದೆ .ಇವರು ಶ್ರೀ ಮಠದ ಪೀಠವನ್ನಲಂಕರಿಸಿದ ಅವಧಿ ಒಟ್ಟು ಹದಿನೇಳು ವರ್ಷಗಳು.
ತಮ್ಮ ಅಂತಿಮದಿನಗಳನ್ನು ತೀರ್ಥ-ಕ್ಷೇತ್ರಗಳಲ್ಲಿ ಕಳೆದ ಶ್ರೀಗಳು ಶಾಲಿವಾಹನ ಶಕ ೧೫೧೧(ಕ್ರಿ.ಶ.೧೫೮೮) ಸರ್ವಧಾರಿಸಂವತ್ಸರದ ಜ್ಯೇಷ್ಠ ಬಹುಳ ದ್ವಿತೀಯಾ ತಿಥಿಯಂದು ಹರಿದ್ವಾರದಲ್ಲಿ ಹರಿಪದವನ್ನು ಸೇರಿದರು.
The seventeenth eminent seer in the lineage of Shri Hrishikesha Teertha is Shri Raghupati Teertha. There is a record at the matha of him having performed Shrimanyaayasudha mangala 6 times. His name has procured a prominent place in the list of scholarly gems during the period of Shri Vadirajaru.
He adorned the peeta of Shri Matha for 17 years. He spent his final days on pilgrimages and in Shalivahana shaka 1511 (1588 A.D.), Sarvadhaari samvatsara jyeshta bahula dwiteeya thithi, he attained Haripada at Haridwara.