Another great soul in the lineage of Palimaru Matha who illuminated the institution is Shri Shri Raghupungava Teertha. He is the twenty second seer in the lineage.
ಶ್ರೀರಘುಪುಂಗವ ತೀರ್ಥರು
ಪಲಿಮಾರುಮಠದ ಗುರುಪರಂಪರೆಯಲ್ಲಿ ಸಂಸ್ಥಾನವನ್ನು ಬೆಳಗಿದ ಇನ್ನೊಬ್ಬ ಮಹಾನ್ ಚೇತನ ಪ್ರಾತಃಸ್ಮರಣೀಯರಾದ ಶ್ರೀಶ್ರೀರಘುಪುಂಗವತೀರ್ಥರು. ಇವರು ಪರಂಪರೆಯಲ್ಲಿ ಇಪ್ಪತ್ತೆರಡನೆಯವರು.
ಇವರು ಪಲಿಮಾರಿನಲ್ಲಿರುವ ಜೀರ್ಣವಾಗಿದ್ದ ಮೂಲಮಠವನ್ನು ಜೀರ್ಣೋದ್ಧಾರಗೊಳಿಸಿದವರು. ಈಗ ನಾವು ಪಲಿಮಾರಿನಲ್ಲಿ ಕಾಣುವ ಭವ್ಯವಾದ ಮಠವು ಶ್ರೀಶ್ರೀರಘುಪುಂಗವ ತೀರ್ಥರ ಕಲ್ಪನೆಯ ಕೂಸು. ಇದು ಸುಮಾರು ಮುನ್ನೂರ ಐವತ್ತು ವರ್ಷಗಳಷ್ಟು ಹಿಂದಿನದ್ದು
ಮಠದ ನವೀಕರಣದ ಬಗ್ಗೆ ದಾಖಲೆಯನ್ನು ಶ್ರೀಪಾದಂಗಳವರು ಮಠದ ಗರ್ಭಗುಡಿಯ ಮುಂದಿನ ಕಂಬವೊಂದರಲ್ಲಿ ಹೀಗೆ ಕೆತ್ತಿಸಿದ್ದಾರೆ.
ರಘುಪುಂಗವಧಾಮೇದಂ ರಘುಪುಂಗವಯೋಗಿನಾ |
ರಘುಪುಂಗವಸಂಪ್ರೀತ್ಯೈ ಪಿಂಗಲಾಬ್ದೇ ನವೀಕೃತಮ್ ||
ಹೀಗೆ ರಾಮಚಂದ್ರನ ಭವ್ಯಮಂದಿರವನ್ನು ರಾಮನ ಪ್ರೀತಿಗಾಗಿ ಶ್ರೀಪಾದರು ಪಿಂಗಲವತ್ಸರದಲ್ಲಿ ನವೀಕರಿಸಿ ರಾಮಚಂದ್ರನಿಗೆ ಅರ್ಪಿಸಿದರು.
ಭಕ್ತಿ, ವಿರಕ್ತಿ ಭೂಷಣರಾದ ಇವರು ಸುಮಾರು ನಲವತ್ತೈದು ವರ್ಷಗಳ ಕಾಲ ಪೀಠದಲ್ಲಿ ವಿರಾಜಮಾನರಾಗಿ ಶಾಲಿವಾಹನಶಕ ೧೬೭೨(ಕ್ರಿ.ಶ.೧೭೫೦) ಪ್ರಮೋದಸಂವತ್ಸರದ ಭಾದ್ರಪದ ಶುದ್ಧ ಷಷ್ಠಿಯಂದು ಕಾಂತಾವರದ ಮಠದಲ್ಲಿ ಲಕ್ಷ್ಮೀನರಸಿಂಹನ ಪಾದವನ್ನು ಸೇರಿದರು.
Another great soul in the lineage of Palimaru Matha who illuminated the institution is Shri Shri Raghupungava Teertha. He is the twenty second seer in the lineage.
He is the one who initiated the restoration of the dilapidated moola matha at Palimaru. The magnificient matha that we now see at Palimaru was the brain child of Shri Shri Raghupungava Teertha. It was restored about 350 years ago.
His Holiness has documented the renewal of the matha through an engraving on a pillar in front of the sanctum sanctorum of the matha as below:
Raghupuṅgavadhāmēdaṁ raghupuṅgavayōginā |
raghupuṅgavasamprītyai piṅgalābdē navīkr̥tam ||
Thus, the resplendent dwelling of Lord Ramachandra was restored by His Holiness for the love of the Lord and submitted to Him in Pingala samvatsara.
Embellished with devotion and aversion to worldly attachments, He adorned the peeta for 45 years. In Shalivahana shaka 1672 (1750 A.D.) bhaadrapada shuddha shashti, he attained the lotus feet of Lakshminarasimha at the matha in Kanthavara.