ಪಲಿಮಾರು ಮಠದ ಪರ್ಯಾಯ ಮಹೋತ್ಸವದ ಸ್ವಾಗತ ಸಮಿತಿಯವರು ಪರ್ಯಾಯದಲ್ಲಿ ಬಂದ ದೇಣಿಗೆಯಿಂದ ಒಟ್ಟು ಖರ್ಚು ವೆಚ್ಚಗಳನ್ನುಕಳೆದು ಉಳಿದ ಮೊತ್ತ 12,63,363 /- ರೂಪಾಯಿಗಳನ್ನು ಪರ್ಯಾಯ ಪೀಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಸಮಿತಿಯ ಕಾರ್ಯಾಧ್ಯಕ್ಷರಾದ ಬಾಲಾಜಿ ರಾಘವೇಂದ್ರ ಆಚಾರ್ಯ,ಅಧ್ಯಕ್ಷರಾದ ಶ್ರೀಧರ ಭಟ್, ಪ್ರಧಾನ ಕಾರ್ಯದರ್ಶಿಗಳಾದ ಪದ್ಮನಾಭ ಭಟ್,ಮತ್ತು ಲಕ್ಷ್ಮೀನಾರಾಯಣ ರಾವ್, ಖಜಾಂಚಿ ರಮೇಶ್ ರಾವ್ ಬೀಡು ಹಾಗೂ ಕಾರ್ಯಾಲಯ ಮುಖ್ಯಸ್ಥರಾದ ಶ್ರೀಪತಿ ಭಟ್ ಇವರು ಸಮರ್ಪಿಸಿದರು.