Arpanotsava

Sri Swamiji’s 60th Birthday – Arpanotsava

ಶ್ರೀಪಾದರು ತಮ್ಮ ಹತ್ತನೇ ಸುಧಾಮಂಗಳದ ಅರ್ಪಣೆಯ ಪ್ರಯುಕ್ತ “ಶ್ರೀಮನ್ಯಾಯಸುಧಾನುವಾದ” ಮಾಡಿದರು.

ಪಲಿಮಾರು ಮಠದ ಶ್ರೀಪಾದರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಅರವತ್ತು ವರ್ಷದ ಸಾರ್ಥಕ ಬದುಕಿನ ತಿರುಪತಿಯ ಶ್ರೀ ಶ್ರೀನಿವಾಸನಿಗೆ ಅರ್ಪಿಸುವ “ಅರ್ಪಣೋತ್ಸವ”ದ ಪ್ರಧಾನ ಕಾರ್ಯಕ್ರಮವಾದ ತಾವು ಮಾಡಿದ ಹತ್ತನೇ ಶ್ರೀಮನ್ಯಾಯಸುಧಾ ಪಾಠದ ಅರ್ಪಣೆ “ಶ್ರೀಮನ್ಯಾಯಸುಧಾಮಂಗಳದ ಅರ್ಪಣೋತ್ಸವವನ್ನು ಇಂದು ಬಹಳ ವಿದ್ವತ್ಪೂರ್ಣವಾಗಿ ಅರ್ಪಿಸಿದರು. ಈ ಸಂದರ್ಭದಲ್ಲಿ ಅದಮಾರು ಮಠದ ಹಿರಿಯ ಶ್ರೀಪಾದರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಭಂಡಾರಿಕೇರಿ ಮಠದ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಮಂತ್ರಾಲಯ ಮಠದ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಬನ್ನಂಜೆಯ ಶ್ರೀ ಶ್ರೀ ರಾಘವೇಂದ್ರತೀರ್ಥ ಶ್ರೀಪಾದರು, ಶ್ರೀ ಶ್ರೀಪಾದರಾಜಮಠದ ಶ್ರೀಪಾದರು ಉಪಸ್ಥಿತರಿದ್ದರು. ಹಾಗೆ ಈ ಸಂದರ್ಭದಲ್ಲಿ ಪಲಿಮಾರು ಮಠದ ತತ್ವಸಂಶೋಧನ ಸಂಸತ್ತಿನಲ್ಲಿ ಮುದ್ರಿತವಾದ ಗ್ರಂಥಗಳನ್ನು ಶ್ರೀಪಾದರು ಆಗಮಿಸಿದ ಯತಿವರೇಣ್ಯರ ಮೂಲಕ ಪರಬ್ರಹ್ಮನಿಗೆ “ಗ್ರಂಥಾರ್ಪಣೆ” ಮಾಡಿದರು.

Arpanotsava 2015 on display in the form of dolls at a devotees residence in Bangalore

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.