Sri Raghavendra Teertharu

14. ಶ್ರೀ ರಾಘವೇಂದ್ರತೀರ್ಥರು

14. Shri Raghavendra Teertha

ಪರಂಪರೆಯಲ್ಲಿ ಇವರು ಹದಿನಾಲ್ಕನೆಯವರು. ಇವರ ಗುರುಗಳಿಗೆ ತಕ್ಕ ಶಿಷ್ಯರೆನಿಸಿ ಚಾಂದ್ರಾಯಣಾದಿ ಕಠಿಣವ್ರತಗಳನ್ನು ಆಚರಿಸಿದವರು.ಸ್ವಯಂ ಮಹಾವಿದ್ವಾಂಸರಾಗಿದ್ದ ಇವರು ಪಾಠ-ಪ್ರವಚನಗಳನ್ನು ಉಸಿರಾಟದಂತೆ ನಿರಂತರವಾಗಿ ನಡೆಸಿಕೊಂಡು ಬಂದವರು. ಇವರು ಎಂಟು ಬಾರಿ ಶ್ರೀಮನ್ನ್ಯಾಯಸುಧಾಮಂಗಳವನ್ನು ನಡೆಸಿದ ಘನಜ್ಞಾನಿಗಳು. ಪಾಠ ಪ್ರವಚನದೊಂದಿಗೆ ತೀರ್ಥ-ಕ್ಷೇತ್ರಸಂಚಾರವನ್ನೂ ಕೂಡಾ ನಡೆಸಿದವರು.

ಹೀಗೆ ರಾಮಪದಪದ್ಮಾರಾಧಕರಾದ ಶ್ರೀಪಾದರು ಹದಿಮೂರು ವರ್ಷಗಳ ಕಾಲ ಪೀಠವನ್ನಲಂಕರಿಸಿ ಶಾಲಿವಾಹನ ಶಕ ೧೪೬೫ (ಕ್ರಿ.ಶ-೧೫೪೩) ಶುಭಕೃತ್ ಸಂವತ್ಸರದ ಮಾಘಶುದ್ಧ ಅಷ್ಟಮಿಯಂದು (ಭೀಷ್ಮಾಷ್ಟಮಿ) ಶ್ರೀರಂಗಕ್ಷೇತ್ರದಲ್ಲಿ ರಂಗನಾಥನ ಪಾದವನ್ನು ಸೇರಿದರು.

He is the fourteenth in the lineage. A disciple worthy of his guru, he observed difficult vows such as the chaandraayana. Being a great scholar himself, he conducted lessons and discourses as incessantly as breath. He is a distinguished seer who has conducted Shrimanyaayasudha mangala eight times. Alongside teaching, he also went on pilgrimages.

In this way, he adorned the peeta for a period of 13 years and in Shalivahana shaka 1465 (1543 A.D.) Shubhakrit samvatsara maagha shuddha ashtami (bheeshmaashtami), he attained the feet of Lord Ranganatha at Shriranga.