Sri Aparajita Teertharu

The fourth seer in this lineage is Shri Aparajita Teertha. This name too is one among the thousand names of the Lord. Aparajita means undefeated.

4. ಶ್ರೀಅಪರಾಜಿತ ತೀರ್ಥರು
4. Shri Aparajita Teertharu

ಈ ಪರಂಪರೆಯಲ್ಲಿ ಬಂದ ನಾಲ್ಕನೆಯ ಯತಿಗಳು ಶ್ರೀಅಪರಾಜಿತತೀರ್ಥರು. ಭಗವಂತನ ಸಾವಿರನಾಮಗಳಲ್ಲಿ ಇದೂ ಒಂದು. ಅಪರಾಜಿತ ಅಂದರೆ ಸೋಲದವನು ಎಂದರ್ಥ. ಭಗವಂತನು ಯಾರಿಂದಲೂ ಯಾವತ್ತೂ ಸೋಲದವನು. ಈ ಚಿಂತನೆಯನ್ನೊಳಗೊಂಡ ಗುರುಗಳಾದ ಶ್ರೀಸಂಭವತೀರ್ಥರು ತನ್ನ ಶಿಷ್ಯನ ಪಾಲಿಗೆ ಯಾವತ್ತೂ ಸೋಲು ಬರಬಾರದು. ಶಾಸ್ತ್ರ ವಾಕ್ಯಾರ್ಥಗಳಲ್ಲಿ ಯಾವತ್ತೂ ಜಯವೇ ಪ್ರಾಪ್ತಿಯಾಗಬೇಕು ಎಂಬ ಉದ್ದೇಶದಿಂದ ತನ್ನ ಉತ್ತರಾಧಿಕಾರಿಗಳಿಗೆ ಶ್ರೀಅಪರಾಜಿತತೀರ್ಥರು ಎಂದು ನಾಮಕರಣಮಾಡಿದರು. ಇವರು ಕೂಡಾ ತಮ್ಮ ಜೀವನವನ್ನು ಆಚಾರ್ಯರ ಸಿದ್ಧಾಂತ ಪ್ರಚಾರಕ್ಕಾಗಿ ಮೀಸಲಿಟ್ಟವರು. ಪಾಠ-ಪ್ರವಚನ, ಅರ್ಚನ, ಧ್ಯಾನಗಳಿಂದ ಭಗವಂತನನ್ನು ಒಲಿಸಿಕೊಂಡವರು. ಸಾರ್ಥಕಜೀವನ ಇವರದ್ದಾಗಿತ್ತು. ಮೂವತ್ತು ವರ್ಷಗಳ ಕಾಲ ಮಠಾಧಿಪತ್ಯವನ್ನು ವಹಿಸಿಕೊಂಡವರು. ವಿರೋಧಿ ಸಂವತ್ಸರದ ಮಾಘಶುದ್ಧ ಸಪ್ತಮಿಯಂದೇ ಗೋದಾವರೀ ನದಿಯ ತೀರದಲ್ಲಿ ಪೂಜ್ಯ ಶ್ರೀಚರಣರು ವೃಂದಾವನಸ್ಥರಾದರು.

The fourth seer in this lineage is Shri Aparajita Teertha. This name too is one among the thousand names of the Lord. Aparajita means undefeated. The Lord has never been defeated by anyone at point of time. With this contemplation, Shri Sambhava Teertha named his successor Shri Aparajita Teertha intending that his disciple never encounters defeat and must always emerge victorious in expounding the religious treatises. He too dedicated his life to promoting the ideology of Acharya. He propitiated the Lord through lessons and discourses, worshipping and meditating upon him. He lead a fulfilling life. He headed the matha for 30 years. During Virodhi samvatsara, magha shuddha saptami, His Holiness attained vrindavana at the banks of the Godavari river.