Sri Vidyamurti Teertharu

5. ಶ್ರೀವಿದ್ಯಾಮೂರ್ತಿತೀರ್ಥರು
5. Shri Vidyamurti Teertharu

ಈ ಪರಂಪರೆಯ ಐದನೆಯ ಪೀಠಾಧಿಪತಿಗಳು ಶ್ರೀವಿದ್ಯಾಮೂರ್ತಿತೀರ್ಥರು ಇವರು ಹೆಸರಿನಂತೇ ಘನವಿದ್ವತ್ತಿನ ಮೂರ್ತಿಗಳಾಗಿದ್ದರು. ಪ್ರಕಾಂಡ ಪಂಡಿತರೆನಿಸಿದ ಇವರು ಅನೇಕ ಬಾರಿ ದುರ್ವಾದಿಗಳನ್ನು ವಾದದಲ್ಲಿ ಸೋಲಿಸಿ ಜಯಶೀಲರಾದವರು. ಮಾಧ್ವಪರಂಪರೆಯಲ್ಲಿ ಬಂದ ಇನ್ನೊಬ್ಬ ಮಹಾನ್ ದಿಗ್ಗಜರಾದ ಶ್ರೀಮನ್ನ್ಯಾಯಸುಧೆಯ ಕರ್ತೃಗಳಾದ ಶ್ರೀಮಟ್ಟೀಕಾಕೃತ್ಪಾದರ ಸಮಕಾಲೀನರು ಶ್ರೀವಿದ್ಯಾಮೂರ್ತಿತೀರ್ಥರು. ಇವರ ಚರಿತ್ರೆಯನ್ನು ಗಮನಿಸಿದಾಗ ಶ್ರೀಟೀಕಾಕೃತ್ಪಾದರು ಹಾಗೂ ಇವರು ಜೊತೆಯಾಗಿಯೇ ತತ್ವಪ್ರಚಾರವನ್ನು ಮಾಡಿರಬೇಕು. ಹನ್ನೊಂದು ವರ್ಷಗಳ ಕಾಲ ಪೀಠವನ್ನಾಳಿದ ಇವರು ಪ್ಲವಸಂವತ್ಸರದ ವೈಶಾಖಶುದ್ಧ ಅಷ್ಟಮೀ ದಿನದಂದು ಮಳಖೇಡದಲ್ಲಿ ಭಗವಂತನ ಪಾದವನ್ನು ಸೇರಿದರು.

The fifth seer in this lineage is Shri Vidyamurti Teertha. He was profoundly erudite akin to his name. Known as an excellent scholar, he defeated opponents making wrong arguments in debates and emerged victorious several times. Shri Vidyamurti Teertha is a contemporary of another great luminary Shri Teekakritpaada who was the writer of Shrimanyayasudha. Observing their disposition, it is quite possible that he and Shri Teekakritpaada have together engaged in propounding the philosophy. Having remained on the peeta for 11 years, during Pallava samvatara, vaishakha shuddha ashtami, he attained the feet of the Lord at Malakheda.