Shri Rajarejeshwara Teertha is a distinguished seer who not only illuminated the lineage of Palimaru Matha but also the lineage of sages of Bharata throught his poetic skill. He is the sixth seer in the lineage of Palimaru Matha.
ಶ್ರೀಪಲಿಮಾರುಮಠದ ಪರಂಪರೆಯನ್ನಷ್ಟೇ ಅಲ್ಲದೇ ತಮ್ಮ ಕವಿತ್ವದ ಮೂಲಕ ಭಾರತದ ಋಷಿಪರಂಪರೆಯನ್ನು ಬೆಳಗಿಸಿದ ಮಹಾನ್‌ಯತಿ ಶ್ರೀರಾಜರಾಜೇಶ್ವರತೀರ್ಥರು. ಪಲಿಮಾರುಮಠದ ಪರಂಪರೆಯಲ್ಲಿ ಆರನೆಯವರು. ಶ್ರೀಶ್ರೀವಿದ್ಯಾಮೂರ್ತಿತೀರ್ಥರು ತಮ್ಮ ಗುರುಗಳಾದ ಶ್ರೀಶ್ರೀಅಪರಾಜಿತತೀರ್ಥರು ಪೀಠದಲ್ಲಿರುವಾಗಲೇ ಶ್ರೀರಾಜರಾಜೇಶ್ವರತೀರ್ಥರಿಗೆ ಆಶ್ರಮನೀಡಿದ್ದರು. ಇವರು ಸಹಜವಾದ ಕವಿ. ಇವರ ಪಾಂಡಿತ್ಯಕ್ಕೆ ಮೆಚ್ಚಿ ಮಂಗಳೂರಿನ ಪ್ರಾಂತದ ಸಾಮಂತರಾಜನೊಬ್ಬ ಕಾಂತಾವರದ ಜಮೀನನ್ನು ಅವರಿಗೆ ದಾನವಾಗಿ ನೀಡಿದ್ದ. ಇದಕ್ಕೆ ಸಂಬಂಧಪಟ್ಟ ಶಿಲಾಶಾಸನ ಈಗಲೂ ಕಾಂತಾವರಮಠದಲ್ಲಿ ಸುರಕ್ಷಿತವಾಗಿದೆ.
ಸದ್ಯಕ್ಕೆ ರಾಜರಾಜೇಶ್ವರತೀರ್ಥರ ಉಪಲಬ್ಧವಾದ ಕೃತಿಗಳು ಎರಡು. 1. ರಾಮಸಂದೇಶ 2. ಮಂಗಳಾಷ್ಟಕ.
ರಾಮಸಂದೇಶ ಕಾಳಿದಾಸನ ಮೇಘಸಂದೇಶದಿಂದ ಸ್ಫೂರ್ತಿಪಡೆದ ಸಂದೇಶ ಕಾವ್ಯ. ಕಾವ್ಯದ ಕಥಾನಾಯಕನಾದಂತಹ ರಾಮಚಂದ್ರನು ಹನುಮಂತನ ಮೂಲಕ ಸೀತೆಗೆ ಕಳುಹಿಸಿದ ಸಂದೇಶ ಇದು. ಅದರ ಜೊತೆಗೆ ಹನುಮಂತ ಲಂಕೆಗೆ ಹೋಗಬೇಕಾದ ಮಾರ್ಗದಲ್ಲಿ ಸಿಗುವ ಭೂಭಾಗದ ವರ್ಣನೆ ಅದರಲ್ಲೂ ವಿಶೇಷವಾಗಿ ತೌಳವಮಂಡಲದ ಸುಂದರವಾದ ಚಿತ್ರಣ ಈ ಸಂದೇಶಕಾವ್ಯದಲ್ಲಿ ಅಡಗಿದೆ. ವೇದಾಂತದೇಶಿಕರ ಹಂಸ ಸಂದೇಶವೂ ಕೂಡಾ ಇದೇ ಮಾದರಿಯ ಸಂದೇಶಕಾವ್ಯ. ಮೇಘಸಂದೇಶ-ಹಂಸಸಂದೇಶಗಳ ಸಾಲಿಗೆ ಸೇರುವ ಇನ್ನೊಂದು ಉತ್ತಮವಾದ ಕಾವ್ಯ ರಾಮಸಂದೇಶ. ಸಂದೇಶಕಾವ್ಯಕ್ಕೆ ಪೌರಾಣಿಕ ಚೌಕಟ್ಟನ್ನಿತ್ತು ರಾಮಭಕ್ತಿಯನ್ನು ಮೆರೆವ ಸುಂದರಕಾವ್ಯ ರಾಮಸಂದೇಶ.
ಅವರ ಎರಡನೆಯ ಪುಟ್ಟ ಕೃತಿ ಮಂಗಲಾಷ್ಟಕ. ಜಾತಿ, ಮತ, ಭೇದವಿಲ್ಲದೆ ಎಲ್ಲರೂ ಮನ್ನಿಸಿದ ಮಂಗಲಾಷ್ಟಕ. ಮುಂಜಾವಿನಲ್ಲಿ ಎಲ್ಲರ ಮನೆಗಳಲ್ಲೂ ಪಠಿಸುವ ಮಂಗಲಾಷ್ಟಕ. ಇದೊಂದು ಪುಟ್ಟವಾದ ಚಂದದ ಮಂಗಲಾಷ್ಟಕ. ಮುಂಜಾನೆ ಎದ್ದು ಸ್ಮರಿಸಬೇಕಾದ ಎಲ್ಲಾ ಮಾಂಗಲಿಕ ಸಂಗತಿಗಳನ್ನು ಶ್ರೀರಾಜರಾಜೇಶ್ವರತೀಥರು ಈ ಅಷ್ಟಕದಲ್ಲಿ ಸೇರಿಸಿದ್ದಾರೆ. ಈ ಮಂಗಲಾಷ್ಟಕಕ್ಕೆ ಸಾಟಿಯಾದ ಇನ್ನೊಂದು ಸುಪ್ರಭಾತ ಸಂಸ್ಕೃತಸಾಹಿತ್ಯದಲ್ಲೇ ಇಲ್ಲವೆಂದರೆ ತಪ್ಪಾಗಲಾರದು. ಇಡೀ ಬ್ರಹ್ಮಾಂಡವನ್ನೇ ತನ್ನೊಳಗೆ ಇಟ್ಟುಕೊಂಡ ಪುಟ್ಟಕೃತಿ. ಆಕೃತಿಯಲ್ಲಿ ಈ ಕೃತಿ ವಾಮನ. ಅರ್ಥದಲ್ಲಿ ತ್ರಿವಿಕ್ರಮ. ಇದೊಂದು ರಾಷ್ಟ್ರಗೀತೆಯೂ ಹೌದು.
ಶ್ರೀರಾಜರಾಜೇಶ್ವರತೀರ್ಥರ ಈ ಮಂಗಲಾಷ್ಟಕ ಅದ್ಭುತವಾದ ಹಾಗೂ ಅಷ್ಟೇ ಸುಂದರವಾದ ರಚನೆ. ಇದರ ಸೊಬಗು ಜನಮನವನ್ನು ವ್ಯಾಪಕವಾಗಿ ಸೆಳೆಯಿತು. ಇವತ್ತು ಮದುವೆ ಮುಹೂರ್ತದಲ್ಲಿ ಹೆಣ್ಣು-ಗಂಡು ಹಾರವಿನಿಮಯಮಾಡುವಾಗ, ಉಪನಯನದಲ್ಲಿ ಯಜ್ಞೋಪವೀತ ಹಾಕುವಾಗ ಎಲ್ಲರೂ ಈ ಮಂಗಲಾಷ್ಟಕವನ್ನೂ ಪಠಿಸುತ್ತಾರೆ. ಅಷ್ಟು ಜನಪ್ರಿಯತೆ ಈ ಕೃತಿಗಿದೆ. ಪ್ರಾತಃಸ್ತೋತ್ರವಂತೂ ಮಂಗಲಾಷ್ಟಕವಿಲ್ಲದೇ ಅಪೂರ್ಣವೇ ಸರಿ.
ಗ್ರಂಥಕಾರರು ಬಯಸಿದ್ದೂ ಕೂಡಾ ಇದನ್ನೇ. ಮಾಂಗಲ್ಯಾದಿ ಶುಭಸಮಾರಂಭಗಳಲ್ಲಿ ಇದನ್ನು ಜನರು ಪಠಿಸುವಂತಾಗಬೇಕು ಎನ್ನುವುದು ಅವರ ಆಸೆಯಾಗಿತ್ತು. ಅವರ ಇಚ್ಛಾಶಕ್ತಿ ದೊಡ್ಡದು ಉನ್ನತಪ್ರಾರ್ಥಿತ-ಅಶೇಷಸಂಸಾಧಕ ನಾದ ಭಗವಂತ ಅವರ ಇಚ್ಛೆಯನ್ನು ಪೂರ್ತಿಗೊಳಿಸಿದ. ಈ ಕೃತಿ ರಚನೆಯಾಗಿ ಆರು ಶತಮಾನಗಳು ಸರಿದರೂ ಅದರ ಕೀರ್ತಿ ಮಾತ್ರ ಹಚ್ಚ ಹಸುರಾಗಿಯೇ ಇದೆ. ಇದು ಶ್ರೀರಾಜರಾಜೇಶ್ವರತೀರ್ಥರ ಅಗಾಧವಾದ ಪಾಂಡಿತ್ಯಕ್ಕೆ ದ್ಯೋತಕ.
ಇಂತಹ ಮಹಾನ್ ಕವಿ ಪಟ್ಟವನ್ನೇರುವ ಮುಂಚೆಯೇ ತಮ್ಮ ಗುರುಗಳ ಸನ್ನಿಧಿಯಲ್ಲಿಯೇ ಭೌದ್ಧಿಕ ಹಾಗೂ ಭೌತಿಕಸಂಪತ್ತನ್ನು ಶ್ರೀರಾಮನಿಗೆ ಅರ್ಪಿಸಿ ಅತೀಕಿರಿಯ ವಯಸ್ಸಿನಲ್ಲಿಯೇ ರಾಮಪಾದವನ್ನು ಸೇರಿದರು. ಇದು ಈ ನಾಡಿನ ದುರ್ದೈವ. ಅವರು ಇನ್ನಷ್ಟು ಕಾಲ ಬದುಕಿದ್ದರೆ, ಈ ಪರಂಪರೆಯ ಮಹಾನ್ ಕವಿಯಾಗಿ ಇನ್ನಷ್ಟು ಶಾಸ್ತ್ರ-ಕಾವ್ಯಗಳನ್ನು ಕೊಡುತ್ತಿದ್ದರೇನೋ?. ಆದರೆ ವಿಧಿ ಕರುಣೆ ತೋರಲಿಲ್ಲ. ಸಮಾಜ ಒಬ್ಬ ಮಹಾನ್ ಯತಿಯಲ್ಲಿದ್ದ ಮಹಾನ್ ಕವಿಯನ್ನು ಕಳೆದುಕೊಂಡಿತು.
ಇವರ ವೃಂದಾವನ ಪಲಿಮಾರಿನಲ್ಲಿದೆ. ಪಲಿಮಾರುಮಠದ ಗುರುಪರಂಪರೆಯಲ್ಲಿ ನಮಗೆ ಉಪಲಬ್ಧವಾದ ಮೊದಲ ವೃಂದಾವನ ಶ್ರೀರಾಜರಾಜೇಶ್ವರತೀರ್ಥರದ್ದೇ. ಇವರ ಮೊದಲಿನ ಐವರು ಯತಿಗಳ ವೃಂದಾವನವೂ ನಮಗೆ ದೊರೆತಿಲ್ಲ. ಶ್ರೀರಾಜರಾಜೇಶ್ವರತೀರ್ಥರ ಕಾಲದಲ್ಲೇ ಪಲಿಮಾರುಗ್ರಾಮದಲ್ಲಿ ಶ್ರೀಹೃಷೀಕೇಶತೀರ್ಥರ ಮಠ ರೂಪುಗೊಂಡಿತ್ತು. ಆಗಲೇ ಇದಕ್ಕೆ ಪಲಿಮಾರುಮಠ ಎಂಬ ಹೆಸರು ಬಂದಿತ್ತು. ಶ್ರೀರಾಜರಾಜೇಶ್ವರತೀರ್ಥರು ವೃಂದಾವನಸ್ಥರಾದ ದಿನದ ದಾಖಲೆ ದೊರೆತಿಲ್ಲ ಎನ್ನುವುದು ದುರದೃಷ್ಟಕರ ಸಂಗತಿ. ಆದರೂ ಈಗಲೂ ಕೂಡಾ ಚೈತ್ರ ಹುಣ್ಣಿಮೆಯಂದು ಅವರ ಆರಾಧನಾ ಮಹೋತ್ಸವವನ್ನು ಪಲಿಮಾರಿನಲ್ಲಿ ನಡೆಸಲಾಗುತ್ತದೆ. ಅಷ್ಟೇ ಅಲ್ಲದೇ ಅವರ ಸಂಸ್ಮರಣೆ ಹಾಗೂ ಅನುಗ್ರಹದ ಸಂಕೇತವಾಗಿ ಪ್ರತಿವರ್ಷವೂ ಸಮಾಜದ ಒಬ್ಬ ನಿಷ್ಠಾವಂತ ಧರ್ಮಶಾಸ್ತ್ರಜ್ಞರಾದ ವೇದಾಂತಶಾಸ್ತ್ರವನ್ನರಿತ ಪುರೋಹಿತರಿಗೆ ಶ್ರೀರಾಜರಾಜೇಶ್ವರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಹೀಗೆ ಶ್ರೀರಾಜರಾಜೇಶ್ವರತೀರ್ಥರ ಜೀವಿತಾವಧಿ ಅಲ್ಪವಾದರೂ ಕೂಡಾ ಅವರ ಕೀರ್ತಿ ಇಂದಿಗೂ ಕೂಡಾ ಜೀವಂತವಾಗಿದೆ. ಅಂತಹ ಮಹಾನ್ ಚೇತನಕ್ಕೆ ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ
Shri Rajarejeshwara Teertha is a distinguished seer who not only illuminated the lineage of Palimaru Matha but also the lineage of sages of Bharata throught his poetic skill. He is the sixth seer in the lineage of Palimaru Matha. While his guru Shri Shri Aparajita Teertha was still in the peeta , Shri Shri Vidyamurti Teertha initiated Shri Rajarajeshwara Teertha into sainthood. He is a spontaneous poet. Out of admiration for his erudition, a King of the province of Mangalooru donated the land of Kantavara to him. An epigraph pertaining to this is still preserved at Kantavara Matha.
Presently, Ramasandesha and Mangalashtaka are two compositions of Rajarajeshwara Teertha that are available.
Ramasandesha is a poetic message inspired by Meghsandesha of Kalidasa. It dwells upon the message sent by the protagonist of the poem Ramachandra to Sita through Hanumanta. It also describes the landscape that Hanumanta passes through enroute to Lanka especially the beautiful Tulava province. Hamsasandesha composed by Vedanta Desika is a poem with a similar message. Ramasandesha is another superior poem to join the likes of Meghasandesha-Hamsasandesha. Ramasandesha is a poetic message that confines within the mythological framework and exults devotion towards Rama.
His second tiny composition is Mangalashtaka. It has been accepted by all irrespective of caste and creed. An auspicious octet recited in every household at daybreak. This is a small and lovely lyrical. All the auspicious realities to be remembered in the morning are incorporated by Shri Rajareshwara Teertha in this poem. It would not be wrong to conclude that there is no other morning prayer in the entire gamut of cultural literature that could match up to this octet. This little lyrical has assimilated the entire cosmos within itself. In form, this composition is Vamana but in it’s essence it is Trivikrima. This is a national hymn too.
This composition by Shri Rajarajeshwara Teertha is phenomenal and beautiful too. It’s charm captivates the hearts of people far and wide. Today during wedding ceremonies when the bride and groom exchange garlands, while the yagnopaveeta is put during the sacred thread ceremony, this auspicious octet is recited by everyone. This composition is so popular among people. Morning prayers are incomplete without reciting it.
The writer too intended the same. He wished that it be recited by people during all aupicious and holy occassions. His resolve was enormous and the Lord who is worshipped by all of the distinguished seekers, fulfilled his wish. Although this prayer was composed six centuries ago, it’s glory is still verdant. This exemplifies the formidable erudition of Shri Rajarajeshwara Teertha.
Such a lustrous poet, before adorning the peeta, submitted the material and non-material wealth to Lord Rama in the sannidhi of his guru and attained the feet of Rama at a very young age. This is the misfortune of our nation. Had he lived longer, as a eminent poet in the lineage, he would have probably bestowed us with some more sacred compositions?! But destiny didn’t show mercy. Society lost a great seer who was a great poet.
His vrindavana is at Palimaru. The first vrindavana available in the lineage of Palimaru Matha is that of Shri Rajarajeshwara Teertha. The vrindavanas of the five seers who were his predecessor have remained undiscovered. The Matha of Shri Hrishikesha Teertha was establised at Palimaru village during the time of Shri Rajarajeshwara Teertha. Bsck then itself, it came to be known as Palimaru Matha. It is unfortunate that no records are available pertaining to the date when Shri Rajarajeshwara Teertha attained vrindavana. Nevertheless, his aradhana mahotsava is celebrated during chaitra hunnime every year at Palimaru to date. Besides, in remembrance of him and his grace, every year an eminent scholar well versed in vedanta is conferred with the Shri Rajarajeshwara Award and honored. Though the lifespan of Shri Rajarajeshwara Teertha was short, his fame is alive to date. To such a great soul ‘bhūyiṣṭhāṁ tē nama uktiṁ vidhēma’ meaning i offer reverential salutations to you with words within my limited knowledge.