Purushottama Yaaga

ಪುರುಷೋತ್ತಮ ಯಾಗ

ಅಧಿಕಮಾಸವನ್ನು ಪುರುಷೋತ್ತಮ ಮಾಸವೆಂದೇ ಹಿರಿಯರು ಕರೆದಿದ್ದಾರೆ. ಭಗವದ್ಗೀತೆಯ 15ನೆಯ ಅಧ್ಯಾಯವು ಪುರುಷೋತ್ತಮ ಯೋಗ ಎನ್ನುವ ಹೆಸರನ್ನು ಪಡೆದಿದೆ. ಈ ಎರಡು ವಿಶಿಷ್ಟ ಅಂಶಗಳ ಹಿನ್ನೆಲೆಯಲ್ಲಿ ಪರಮಪೂಜ್ಯರಾದ ಶ್ರೀಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಪುರುಷೋತ್ತಮ ಯಾಗ ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ವಿಶ್ವಕಲ್ಯಾಣವೇ ಇದರ ಉದ್ದೇಶ.

ಪುರುಷೋತ್ತಮ ಯೋಗದೊಂದಿಗೆ ಪುರುಷೋತ್ತಮ ಯಾಗ

(ಅಧಿಕಮಾಸದ ಪ್ರಯುಕ್ತ ಜಾಗತಿಕವಾಗಿ  ಭಗವದ್ಗೀತೆಯ ೧೫ನೆಯ ಅಧ್ಯಾಯದ ಪಾರಾಯಣ ಕಾರ್ಯಕ್ರಮ)

ಅಧಿಕಮಾಸವನ್ನು ಪುರುಷೋತ್ತಮ ಮಾಸವೆಂದೇ ಹಿರಿಯರು ಕರೆದಿದ್ದಾರೆ. ಭಗವದ್ಗೀತೆಯ 15ನೆಯ ಅಧ್ಯಾಯವು ಪುರುಷೋತ್ತಮ ಯೋಗ ಎನ್ನುವ ಹೆಸರನ್ನು ಪಡೆದಿದೆ. ಈ ಎರಡು ವಿಶಿಷ್ಟ ಅಂಶಗಳ ಹಿನ್ನೆಲೆಯಲ್ಲಿ ಪರಮಪೂಜ್ಯರಾದ ಶ್ರೀಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಪುರುಷೋತ್ತಮ ಯಾಗ ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ವಿಶ್ವಕಲ್ಯಾಣವೇ ಇದರ ಉದ್ದೇಶ.

ಪುರುಷೋತ್ತಮ ಯಾಗವು ಪುರುಷೋತ್ತಮ ಯೋಗದ ಸಾಮೂಹಿಕ ಪಾರಾಯಣ ಮತ್ತು ಮಂಗಳಮಹೋತ್ಸವದ ಕಾರ್ಯಕ್ರಮ. ಇದು ಈ ಶಾರ್ವರೀ ಸಂವತ್ಸರದ ಅಧಿಕಮಾಸದಲ್ಲಿ ನಡೆಯಲಿದೆ. 29 ದಿನಗಳ ಈ ಅವಧಿಯಲ್ಲಿ ಪ್ರತಿನಿತ್ಯ ಆಸಕ್ತ ಭಕ್ತರು ಗೀತೆಯ 15ನೆ ಅಧ್ಯಾಯವನ್ನು ಯಥಾಶಕ್ತಿ ಪಾರಾಯಣ ಮಾಡುವ ಮೂಲಕ ಭಾಗವಹಿಸಬಹುದು.

ಅಧಿಕಮಾಸದ ಕೊನೆಯಲ್ಲಿ ಪುರುಷೋತ್ತಮಯಾಗದ ಪೂರ್ಣಾಹುತಿಯು ನಡೆಯುತ್ತದೆ.  ಪಾರಾಯಣ ಯಜ್ಞದಲ್ಲಿ ಭಾಗವಹಿಸಿದ ಎಲ್ಲರ ಹೆಸರಿನಲ್ಲಿಯೂ ಅಂದು ಪ್ರಾರ್ಥನೆಯು ಸಲ್ಲುತ್ತದೆ. ಶ್ರದ್ಧೆಯಿಂದ ಪಾಲ್ಗೊಂಡವರಿಗೆ ಈ ಯಾಗವು ಎಲ್ಲ ವಿಧವಾದ ಫಲಗಳನ್ನು ಖಂಡಿತವಾಗಿಯೂ ಕೊಡುವುದು.

ಪಾರಾಯಣವನ್ನು ಪ್ರಾರಂಭಿಸಬೇಕಾದ ದಿನಾಂಕ : 18.09.2020
ಮುಕ್ತಾಯದ ದಿನ :
16.10.2020

ಪ್ರ: ಮಾಡಬೇಕಾದದ್ದು ಏನು?
ಉ: ಸರಳ. ಭಗವದ್ಗೀತೆಯ ಹದಿನೈದನೆಯ ಅಧ್ಯಾಯವನ್ನು 29 ದಿನಗಳ ಪ್ರತಿನಿತ್ಯ ಕಾಲ ಪಾರಾಯಣ ಮಾಡಿ.

ಪ್ರ: ಪಾರಾಯಣ ಮಾಡಲು ಏನು ಅರ್ಹತೆ ಇರಬೇಕು?
ಶ್ರೀಕೃಷ್ಣನ ಮೇಲೆ ಪ್ರೀತಿ ಮತ್ತು ಗೀತೆಯ ಮೇಲೆ ಅಚಲವಾದ ವಿಶ್ವಾಸವೇ ಯಾಗದಲ್ಲಿ ಭಾಗವಹಿಸಲು ಇರಬೇಕಾದ ಅರ್ಹತೆ. ಇಷ್ಟು ಇರುವ ಯಾರು ಬೇಕಾದರೂ ಜಾತಿ ಮತ ವಯಸ್ಸಿನ ಭೇದವಿಲ್ಲದೆ ಭಾಗವಹಿಸಬಹುದು.

ಪ್ರ: ಎಷ್ಟು ಸಲ ಮಾಡಬೇಕು?
ಉ: ಒಂದು ಸಲ ಪಾರಾಯಣ ಮಾಡಲು ಸುಮಾರು 5 ನಿಮಿಷಗಳು ಸಾಕು. ಈ ಲೆಕ್ಕದಲ್ಲಿ ನಿಮಗೆ ಎಷ್ಟು ಸಲ ಮಾಡಲು ಅನುಕೂಲವಾಗುವದೋ ಅಷ್ಟು ಮಾಡಿ. ಕೊನೆಯ ದಿನದಂದು ನಿಮ್ಮ ಪಾರಾಯಣ ಒಟ್ಟಾರೆ ಸಂಖ್ಯೆಯನ್ನು ನಮಗೆ ತಲುಪಿಸಿ. ಆದರೆ ಈ ನೆವದಿಂದ ಮನೆಯ ಇನ್ನಿತರ ಕೆಲಸಗಳನ್ನು ತಪ್ಪಿಸದಿರಿ.

ಪ್ರ: ಏನೆಂದು ಸಂಕಲ್ಪ ಮಾಡಬೇಕು?
ಉ : ಶ್ರೀಪುರುಷೋತ್ತಮನ ಪ್ರೀತಿಗಾಗಿ ಈ ಪಾರಾಯಣವನ್ನು ಮಾಡುತ್ತಿದ್ದೇನೆ ಎಂದು ಸಂಕಲ್ಪ ಮಾಡಿ. ನಿಮ್ಮ ನಿಮ್ಮ ಮನೆತನದ ಸಂಪ್ರದಾಯದಂತೆಯೇ ಸಂಕಲ್ಪದ ಪ್ರಕ್ರಿಯೆಯು ಇರಲಿ.

ಪ್ರ: ಈ ಪಾರಾಯಣವನ್ನು ಮಾಡಲು ನಾವು ಉಡುಪಿಗೆ ಬರಬೇಕೆ?
ಉ: ಪುರುಷೋತ್ತಮ ಯಾಗವು ಜಾಗತಿಕ ಮಟ್ಟದ್ದು. ಭಾಗವಹಿಸಲು ನೀವು ಉಡುಪಿಗೆ ಬರಲು ಅನುಕೂಲವಾದಲ್ಲಿ ಉತ್ತಮವೇ. ಆದರೆ ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆಯಲ್ಲಿ ನೀವುಗಳು ನಿಮ್ಮ ಮನೆಯಲ್ಲಿಯೇ ಕುಳಿತು ಈ ಪಾರಾಯಣವನ್ನು ಮಾಡಬಹುದು.

ಪ್ರ : ಇದಕ್ಕೆ ಶುಲ್ಕ ಎಷ್ಟು?
ಉ: ಯಾವುದೇ ರೀತಿಯ ಶುಲ್ಕವಿರುವುದಿಲ್ಲ.

ಪ್ರ: ನಾವು ಸೌರಮಾನ ಪದ್ಧತಿಯನ್ನು ಅನುಸರಿಸುವವರು. ಅಧಿಕಮಾಸದ ಆಚರಣೆಯೇ ಇಲ್ಲ ನಮಗೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದೇ?
ಉ: ಖಂಡಿತವಾಗಿಯೂ ಭಾಗವಹಿಸಬಹುದು. ಸೌರಮಾನದಲ್ಲಿ ಅಧಿಕಮಾಸದ ಆಚರಣೆಯು ಇಲ್ಲ. ಆದರೆ ಈ ನಿಗದಿತವಾದ ದಿನಾಂಕಗಳಂತೂ ಎಲ್ಲರಿಗೂ ಒಂದೇ. ಹಾಗಾಗಿ ಸೌರಮಾನದವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಭಗವಂತನ ಆರಾಧನೆಯೇ ನಮ್ಮೆಲ್ಲರ ಧ್ಯೇಯವು.

ಪ್ರ: ಪುರುಷೋತ್ತಮ ಯೋಗದ ಸಾಹಿತ್ಯ ಇಲ್ಲ ನನ್ನಲ್ಲಿ. ಆದರೆ ಕಲಿತು ಪಾರಾಯಣ ಮಾಡಲು ಇಷ್ಟವಿದೆ. ಏನು ಮಾಡಲಿ?
ಉ: ಸಾಹಿತ್ಯ ಹಾಗು ಅದನ್ನು ಪಠಿಸುವ ಶೈಲಿಯನ್ನು ನಾವು ಇಲ್ಲಿ ( https://sripalimarumatha.org/downloads/shri-purushottama-yoga )ಪ್ರಕಟಿಸಿದ್ದೇವೆ. ಬಹಳ ಸರಳವಾಗಿದೆ. ನಿಮ್ಮ ಮೊಬೈಲ್ ಫೋನಿನಲ್ಲಿಯೇ ಅದನ್ನು ನೀವು ಅಭ್ಯಸಿಸಬಹುದು.

ಪ್ರ : ಪಾರಾಯಣ ಮಾಡಿದ ಸಂಖ್ಯೆಯನ್ನು ಹೇಗೆ, ಯಾರಿಗೆ ತಲುಪಿಸಬೇಕು?
ಪುರುಷೋತ್ತಮ ಯಾಗದಲ್ಲಿ ಭಾಗವಹಿಸಲು ನೀವು 18.09.2020ರ ಒಳಗಾಗಿ ನಮ್ಮೊಂದಿಗೆ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯ. ಒಮ್ಮೆ ಪಾರಾಯಣವನ್ನು ಪ್ರಾರಂಭಿಸಿದ ನಂತರ ಪ್ರತಿ ದಿನವೂ ನಿಮ್ಮ ಸಂಖ್ಯೆಯನ್ನು ಸಲ್ಲಿಸುವುದೇನೂ ಕಡ್ಡಾಯವಲ್ಲ. ಆದರೆ 15.10.2020 ಸಂಜೆ 7ಗಂಟೆಯ  ಒಳಗಾಗಿ ನಿಮ್ಮ ಪಾರಾಯಣದ ಒಟ್ಟಾರೆ ಸಂಖ್ಯೆಗಳನ್ನು ಸಲ್ಲಿಸತಕ್ಕದ್ದು. 16.10.2020ರ ಬೆಳಿಗ್ಗೆ ಯಥಾಶಕ್ತಿ ಪಾರಾಯಣ ಮಾಡಬಹುದು. ನೋಂದಾಯಿಸಿಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿರಿ  https://forms.gle/LHRWiZedWy9YMKVG9 

ನಿಮ್ಮ ಪಾರಾಯಣದ ವಿವರಗಳನ್ನು ಈ ಮಾಹಿತಿ ಪತ್ರದ ಕೊನೆಯಲ್ಲಿ ಕೊಟ್ಟಿರುವ ದೂರವಾಣಿ ಯಾವುದಾದರೂ ಒಂದು ಸಂಖ್ಯೆಗೆ ಈ ಕೆಳಕಂಡಂತೆ ವಾಟ್ಸ್ಯಾಪ್ ಮೂಲಕ ತಲುಪಿಸಿ.

1.ನಿಮ್ಮ ಹೆಸರು 2. ನಿಮ್ಮ ಗೋತ್ರ 3 ನಿಮ್ಮ ನಕ್ಷತ್ರ ಹಾಗು ರಾಶಿ 4. ನಿಮ್ಮ ಊರು.

ಗಮನಿಸಿ: ದಿನಾಂಕ : 18ರ ಒಳಗಾಗಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿರಿ

ನಿಮ್ಮ ಪಾರಾಯಣದ ಸಂಖ್ಯೆಗಳನ್ನು  ತಲುಪಿಸಬೇಕಾದ ವಾಟ್ಸ್ಯಾಪ್ ಸಂಖ್ಯೆ

Dr. Vamshi Krishna Acharya : 8123458634 : Tulu, Telugu & Kannada
Smt. Vaishnavi Bankalgi : 77957 47513 Kannada & English
Smt. Bhargavi Madhavan : 97909 02490 Kannada, Tamil & English

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.