volunteer drive

Krishna Katha Volunteering FAQ – Kannada

ಭಾಗವಹಿಸುವ ಇಚ್ಛೆಯಿದ್ದಲ್ಲಿ ರಘುನಂದನ ಶರ್ಮ 7892431365 ಈ ಸಂಖ್ಯೆಯಲ್ಲಿ ಸಂಪರ್ಕಿಸಿ

ನೀವು ಈ ಪುಟದಲ್ಲಿ ಆಸಕ್ತಿಯನ್ನು ತೋರಿಸುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ.  ಶ್ರೀಕೃಷ್ಣನ ಕಥೆಯ ಮೂಲಕ ಮಕ್ಕಳಲ್ಲಿ ಸಂಸ್ಕಾರದ ಬೀಜವನ್ನು ಬಿತ್ತುವ ಒಂದು ಕಿರು ಪ್ರಯತ್ನವಿದು.  ಕಥೆಯನ್ನು ಸಭೆಯಲ್ಲಿ ಹೇಳುವ ಧೈರ್ಯವೂ, ತಾಯ್ನುಡಿಯಲ್ಲಿಯೇ ಸರಾಗವಾಗಿ ಮಾತನಾಡುವ ಭಾಷಾ ಪ್ರೇಮವೂ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಹೆಮ್ಮೆಯು ಮಗುವಿನಲ್ಲಿ ನಿರಂತರವಾಗಿ ಮುನ್ನಡೆಯಬೇಕು ಎನ್ನುವುದು ನಮ್ಮ ಅಪೇಕ್ಷೆ.

2017 ರಲ್ಲಿ ನಡೆಸಿದ ಅಂತಾರಾಷ್ಟ್ರೀಯ ಮಟ್ಟದ ಶ್ರೀಕೃಷ್ಣಕಥಾ ಸ್ಪರ್ಧೆಯು ಉತ್ತಮವಾದ ಯಶಸ್ಸನ್ನು ಕಂಡಿತ್ತು. ಈ ಬಾರಿ ಈ ಸ್ಪರ್ಧೆಯು ಇನ್ನೂ ಹೆಚ್ಚಿನ ಮಟ್ಟದ ವಿಸ್ತಾರವನ್ನು ಕಾಣುತ್ತಿದೆ. ಕನ್ನಡ, ತೆಲುಗು ತಮಿಳು, ಮರಾಠಿ, ಹಿಂದಿಯ ಜೊತೆಗೆ ತುಳು, ಬಂಗಾಲಿ ಮತ್ತು ಕೊಂಕಣಿ ಭಾಷೆಗಳು ಸಹ ಸೇರಿಸಲ್ಪಟ್ಟಿವೆ.  ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿದರೆ ಹೆಚ್ಚು ಸಂಸಾರಗಳು ಕೃಷ್ಣನ ಕಥೆಯಲ್ಲಿ ಮಗ್ನರಾಗಿದ್ದಾರೆಂದೇ ಅರ್ಥ.  ಹೆಚ್ಚಿನ ಕುಟುಂಬಗಳನ್ನು ತಲುಪಬೇಕೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರು ಬೇಕು. ನೀವು ಈ ಸ್ವಯಂಸೇವೆಯಲ್ಲಿ ತೊಡಗಲು ಇಚ್ಛಿಸಿಯೆ ಈ ಪುಟವನ್ನು ನೋಡುತ್ತಿದ್ದೀರೆಂದು ನಾವು ಭಾವಿಸುತ್ತೇವೆ. ನಿಮಗೆ ನಮ್ಮ ಅಭಿನಂದನೆಗಳು. ಈ ಕಾರ್ಯಕ್ರಮದಲ್ಲಿ ಮಾಡುವ ನಿಮ್ಮ ಸ್ವಯಂ ಸೇವೆಯು ಶ್ರೀಕೃಷ್ಣನಿಗೆ ಪ್ರಿಯವಾಗಲಿದೆ. 

ಪ್ರಶ್ನೋತ್ತರಗಳು

1. ಈ ಸ್ವಯಂ ಸೇವೆಯಲ್ಲಿ ಪಾಲ್ಗೊಳ್ಳಲು ಇರಬೇಕಾದ ಪ್ರಾಥಮಿಕ ಅರ್ಹತೆ ಏನು?

ಈ ಸ್ವಯಂ ಸೇವೆಯಲ್ಲಿ ಪಾಲ್ಗೊಳ್ಳಲು ಬೇಕಾಗಿರುವ ಪ್ರಾಥಮಿಕ ಅರ್ಹತೆಗಳು.

  • ಶ್ರೀಕೃಷ್ಣನ ಮೇಲೆ ಪ್ರೇಮ ಇರಬೇಕು.
  • ಪ್ರತಿ ನಿತ್ಯ ರಿಂದ ಗಂಟೆಗಳನ್ನು ಕಾರ್ಯಕ್ರಮಕ್ಕಾಗಿ ಕಡ್ಡಾಯವಾಗಿ, ಗಂಭೀರವಾಗಿ ಮುಡಿಪಾಗಿಡಬೇಕು.
  • ಕನ್ನಡ, ತೆಲುಗು, ತುಳು, ತಮಿಳು, ಮರಾಠಿ, ಕೊಂಕಣಿ, ಹಿಂದಿ, ಬಂಗಾಲಿ ಈ ಭಾಷೆಗಳಲ್ಲಿ ಯಾವುದಾದರೂ ಒಂದು ಭಾಷೆಯಲ್ಲಿ ಮಾತನಾಡಲು ಬರಬೇಕು. ಎಲ್ಲವೂ ಬಂದಲ್ಲಿ ಅದ್ಭುತ!
  • ಗ್ರಾಫಿಕ್ ಡಿಸೈನಿಂಗ್, ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್, ಮೈಕ್ರೋಸಾಫ್ಟ್ ಎಕ್ಸೆಲ್ ಇವುಗಳಲ್ಲಿ ಯಾವುದಾದರೂ ಪರಿಣಿತಿ ಇದ್ದಲ್ಲಿ ಒಳ್ಳೆಯದು. ಆದರೆ ಈ ಅಂಶ ಕಡ್ಡಾಯವೇನಲ್ಲ.

2. ಸ್ವಯಂ ಸೇವೆಯಲ್ಲಿ ಭಾಗವಹಿಸುವವರು ಉಡುಪಿಗೆ ಬರಬೇಕೆ?

ಇದೊಂದು ಆನ್ ಲೈನ್ ಸ್ಪರ್ಧೆಯಾಗಿದೆ. ನೀವು ಉಡುಪಿಗೆ ಬಂದೇ ಸೇವೆ ಮಾಡಬೇಕೆಂಬ ನಿಯಮವಿಲ್ಲ. ನಿಮ್ಮ ಮನೆಯಿಂದಲೇ, ಅಥವಾ ನೀವು ಪಯಣಿಸುತ್ತಿರುವಾಗಲೂ ಕೂಡ ಈ ಸೇವೆಯನ್ನು ಮಾಡಬಹುದು.

3. ಈ ಸ್ವಯಂಸೇವೆಯಲ್ಲಿ ನಾನು ಮಾಡಬೇಕಾದ ಕೆಲಸವೇನು?

ಈ ಸ್ವಯಂ ಸೇವೆಯಲ್ಲಿ ಹಲವು ಕೆಲಸಗಳಿವೆ. ಅವುಗಳನ್ನು ಮಾಡಬೇಕು

  • ನಿಮ್ಮ ಫೇಸ್ ಬುಕ್, ವಾಟ್ಸ್ಯಾಪ್ ಗುಂಪುಗಳಲ್ಲಿ ಸ್ಪರ್ಧೆಯ ಬಗ್ಗೆ ಪ್ರಚಾರ ಮಾಡಬೇಕು
  • ನಿಮ್ಮ ಪರಿಚಯದ ಕುಟುಂಬಗಳಲ್ಲಿ ಚಿಕ್ಕ ಮಕ್ಕಳಿದ್ದರೆ ಅವರಿಗೆ ಸ್ಪೂರ್ತಿ ತುಂಬಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಬೇಕು
  • ಅನುಕೂಲವಿದ್ದವರು ಬ್ಯಾನರ್ ಮತ್ತು ಪೋಸ್ಟರ್ ಅನ್ನು ನಿಮ್ಮ ಸಮೀಪದ ದೇಗುಲ ಅಥವಾ ಸತ್ಸಂಗ ನಡೆವ ಸ್ಥಳಗಳಲ್ಲಿ ಪ್ರದರ್ಶಿಸಬೇಕು.
  • ನಿಮ್ಮ ಭಾಷೆಯ ವಿಡಿಯೋವನ್ನು ಸಂಪೂರ್ಣ ವೀಕ್ಷಿಸಿ, ಸ್ಪರ್ಧೆಯ ನಿಯಮಗಳಿಗೆ ಅನುಸಾರವಾಗಿ ಪರೀಕ್ಷಿಸಬೇಕು. ಮತ್ತು, ಅಂಕಗಳನ್ನು ಕೊಡಬೇಕು.

4. ಸ್ವಯಂ ಸೇವಕರಾಗಲು ಹಣ ಕೊಡಬೇಕೆ?

ಇಲ್ಲ. ಇದು ಉಚಿತವಾದ ಸೇವಾ ಅವಕಾಶ

5. ನನಗೆ ನನ್ನ ಮಾತೃಭಾಷೆಯನ್ನು ಬಿಟ್ಟು ಬೇರಾವುದೂ ತಿಳಿದಿಲ್ಲ  ನಾನು ಸ್ವಯಂ ಸೇವಕನಾಗಬಹುದೇ?

ಖಂಡಿತವಾಗಿಯೂ ಆಗಬಹುದು. ಒಂದಕ್ಕಿಂತ ಹೆಚ್ಚು ಭಾಷೆಗಳು ಬಂದಲ್ಲಿ ಉತ್ತಮವೇ ಹೌದು. ಆದರೆ ನಿಮಗೆ ಯಾವ ಭಾಷೆಯಲ್ಲಿ ಉತ್ತಮ ಹಿಡಿತವಿದೆಯೋ ಆ ಭಾಷೆಯಲ್ಲಿ ಮಾತ್ರವೇ ನೀವು ಸ್ವಯಂ ಸೇವೆಯನ್ನು ಮಾಡಬಹುದು.

6. ನಾವು ಪತಿ ಪತ್ನಿ ಇಬ್ಬರೂ ಸೇವೆ ಮಾಡಲು ಇಚ್ಛಿಸುತ್ತೇವೆ. ಆಗಬಹುದೋ?

ಬರೀ ಪತಿ ಪತ್ನಿ ಮಾತ್ರವಲ್ಲ, ಒಂದೇ ಮನೆಯಲ್ಲಿ ಇರುವ ೨೧ ವರ್ಷಕ್ಕೆ ಮೇಲ್ಪಟ್ಟ ಎಲ್ಲ ಸದಸ್ಯರೂ ಈ ಸೇವೆಯಲ್ಲಿ ಪಾಲ್ಗೊಳ್ಳಬಹುದು. ನಾವು ನಿಮ್ಮಿಂದ ನಿರೀಕ್ಷಿಸುವುದು ಸೇವೆಯ ಬಗ್ಗೆ ಗಾಂಭೀರ್ಯವನ್ನಷ್ಟೇ.

7. ಸೇವೆಯನ್ನು ಯಾವ ರೀತಿ ಮಾಡಬೇಕು?

  • ಪೋಷಕರು ತಮ್ಮ ಮಕ್ಕಳ ಸ್ಪರ್ಧೆಯ ವಿಡಿಯೋವನ್ನು ಮಾಡಿ ಯುಟ್ಯೂಬಿನಲ್ಲಿ ಪ್ರದರ್ಶಿಸುತ್ತಾರೆ. ನೀವು ಅದನ್ನು (ಅಂದರೆ ನಿಮ್ಮ ಭಾಷೆಗೆ ಸಂಬಂಧಪಟ್ಟಂತೆ ಇರುವ ಪ್ರತಿಯೊಂದನ್ನೂ)  ಗಮನ ಕೊಟ್ಟು ನೋಡಬೇಕು.  ವಿಡಿಯೋದ ಒಟ್ಟು ಮೌಲ್ಯಮಾಪನವನ್ನು ಮಾಡಬೇಕು. ಅಗತ್ಯ ಇದ್ದಲ್ಲಿ ನಿಮ್ಮ ಭಾಷೆಯ ಇತರ ಸ್ವಯಂಸೇವಕರೊಡನೆ ಸಂವಹನ ಮಾಡಬೇಕು.
  • ಮಕ್ಕಳು ಅಥವಾ ಪೋಷಕರು ನಿಮ್ಮನ್ನು ಸಂಪರ್ಕಿಸಿದಲ್ಲಿ ಅವರೊಂದಿಗೆ ಮಾತನಾಡಿ ಅವರ ಸಂಶಯಗಳನ್ನು ಪರಿಹರಿಸಬೇಕು. ನಿಮಗೆ ಸಹಾಯ ಬೇಕಾದಲ್ಲಿ ಗುಂಪಿನ ಸುಪರ್ ಅಡ್ಮಿನ್ ಇವರನ್ನು ಖಂಡಿತವಾಗಿಯೂ ಸಂಪರ್ಕಿಸಬಹುದು. ಅವರ ಸಹಾಯ ನಿಮಗೆ ದಿನಕ್ಕೆ ೧೮ ಗಂಟೆ ಲಭ್ಯವಿರುತ್ತದೆ.

8. ನಾವು ಸ್ವಯಂ ಸೇವಕರಾಗಲು ಬಯಸುತ್ತೇವೆ. ಆದರೆ ನಮ್ಮ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದೇ ?        
ಆಗಬಹುದು. ಆದರೆ, ಆಗ ನೀವು ಮೌಲ್ಯಮಾಪನದ ಕಾರ್ಯವನ್ನು ಮಾಡಲು ಅವಕಾಶವಿರುವುದಿಲ್ಲ. ಅದೊಂದನ್ನು ಬಿಟ್ಟು ನೀವು ಬೇರೆ ಸೇವೆಯನ್ನು ಸಲ್ಲಿಸಬಹುದು.

9. ಇನ್ನಿತರ ನಿಯಮಗಳು

  • ನಿಮ್ಮ ದೂರವಾಣಿ ಸಂಖ್ಯೆಯನ್ನು ನಮ್ಮ ಮಠದ ವೆಬ್ ಸೈಟಿನಲ್ಲಿ, ಫೇಸ್ ಬುಕ್ಕಿನಲ್ಲಿ ಮತ್ತು ಸ್ಪರ್ಧೆಯ ಜಾಹೀರಾತಿನಲ್ಲಿ ಪ್ರಕಟ ಮಾಡಲಾಗುವುದು.  ಸ್ವಯಂ ಸೇವಕರಾದಲ್ಲಿ ಈ ನಿಯಮಕ್ಕೆ ನೀವು ಒಪ್ಪಿದ್ದೀರೆಂದು ಅರ್ಥ.  ಈ ನಿಯಮ ನಿಮ್ಮ ಫೇಸ್ ಬುಕ್ ಪ್ರೊಫೈಲ್ ಮತ್ತು ವಾಟ್ಸ್ಯಾಪ್ ನಂಬರಿಗೂ ಅನ್ವಯಿಸುತ್ತದೆ.
  • ನೀವು ಚಟುವಟಿಕೆಯಿಂದ ಕೂಡಿದ್ದು, ಪ್ರಗತಿಶೀಲರಾಗಿರುವುದು ಅತ್ಯಗತ್ಯ. ಕಾರಣವಿಲ್ಲದೆಯೆ ಸುಮ್ಮನೆ ಇರುವಂತಿಲ್ಲ. ನಿರಾಸಕ್ತಿದಾಯಕವಾದ ಮಾತನ್ನು ಗುಂಪಿನಲ್ಲಿ ಆಡಬಾರದು. ಇವೆರಡೂ ವರ್ತನೆಗಳು ಇನ್ನಿತರ ಸದಸ್ಯರ ಉತ್ಸಾಹವನ್ನು ಕಡಿಮೆ ಮಾಡುತ್ತದೆ.

ಇನ್ನಿತರ ವಿವರಗಳನ್ನು ಸ್ವಯಂಸೇವಕರಾಗಿ ನೋಂದಾಯಿಸಿಕೊಂಡ ನಂತರ ಕೊಡಲಾಗುತ್ತದೆ.

ಭಾಗವಹಿಸುವ ಇಚ್ಛೆಯಿದ್ದಲ್ಲಿ ರಘುನಂದನ ಶರ್ಮ 7892431365 ಈ ಸಂಖ್ಯೆಯಲ್ಲಿ ಸಂಪರ್ಕಿಸಿ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.