News

Baramadi Subrahmanya Shasti

ಪಲಿಮಾರಿನ ಬರಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ “ಸುಬ್ರಹ್ಮಣ್ಯ ಷಷ್ಠಿ”ಯ ಪ್ರಯುಕ್ತ ದೇವರಿಗೆ ಉತ್ಸವ

ಪಲಿಮಾರಿನ ಬರಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ “ಸುಬ್ರಹ್ಮಣ್ಯ ಷಷ್ಠಿ”ಯ ಪ್ರಯುಕ್ತ ದೇವರಿಗೆ ಉತ್ಸವ ಹಾಗು ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಪಲಿಮಾರಿನ ಬರಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ “ಸುಬ್ರಹ್ಮಣ್ಯ ಷಷ್ಠಿ”ಯ ಪ್ರಯುಕ್ತ ದೇವರಿಗೆ ಉತ್ಸವ Read More »

Abhinandana by Sri Kaniyur Swamiji

ಅಭಿನಂದನಾ ಸಮರ್ಪಣಾ

ಪರ್ಯಾಯ ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಶ್ರೀಪಾದರ ಅರವತ್ತು ವರ್ಷದ ಪ್ರಯುಕ್ತ ವಿಶೇಷ “ಅಭಿನಂದನಾ ಸಮರ್ಪಣಾ” ಕಾರ್ಯಕ್ರಮವನ್ನು ಉಡುಪಿಯ ರಾಜಾಂಗಣದಲ್ಲಿ ನಡೆಸಿದರು. ಈ ಸಂದರ್ಭದಲ್ಲಿ ಶ್ರೀಪಾದರಿಗೆ “ಮುತ್ತಿನ ಅಭಿಷೇಕ” ಮಾಡಲಾಯಿತು ಹಾಗೆ ಅರವತ್ತು ತುಂಬಿದ ಶ್ರೀಪಾದರಿಗೆ ಅರವತ್ತು ಬಗೆಯ ವಸ್ತುಗಳನ್ನೂ ಸಮರ್ಪಿಸಲಾಯಿತು.

ಅಭಿನಂದನಾ ಸಮರ್ಪಣಾ Read More »

Arpanotsava

Sri Swamiji’s 60th Birthday – Arpanotsava

ಶ್ರೀಪಾದರು ತಮ್ಮ ಹತ್ತನೇ ಸುಧಾಮಂಗಳದ ಅರ್ಪಣೆಯ ಪ್ರಯುಕ್ತ “ಶ್ರೀಮನ್ಯಾಯಸುಧಾನುವಾದ” ಮಾಡಿದರು. ಪಲಿಮಾರು ಮಠದ ಶ್ರೀಪಾದರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಅರವತ್ತು ವರ್ಷದ ಸಾರ್ಥಕ ಬದುಕಿನ ತಿರುಪತಿಯ ಶ್ರೀ ಶ್ರೀನಿವಾಸನಿಗೆ ಅರ್ಪಿಸುವ “ಅರ್ಪಣೋತ್ಸವ”ದ ಪ್ರಧಾನ ಕಾರ್ಯಕ್ರಮವಾದ ತಾವು ಮಾಡಿದ ಹತ್ತನೇ ಶ್ರೀಮನ್ಯಾಯಸುಧಾ ಪಾಠದ ಅರ್ಪಣೆ “ಶ್ರೀಮನ್ಯಾಯಸುಧಾಮಂಗಳದ ಅರ್ಪಣೋತ್ಸವವನ್ನು ಇಂದು ಬಹಳ ವಿದ್ವತ್ಪೂರ್ಣವಾಗಿ ಅರ್ಪಿಸಿದರು. ಈ ಸಂದರ್ಭದಲ್ಲಿ ಅದಮಾರು ಮಠದ ಹಿರಿಯ ಶ್ರೀಪಾದರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಭಂಡಾರಿಕೇರಿ ಮಠದ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಮಂತ್ರಾಲಯ

Sri Swamiji’s 60th Birthday – Arpanotsava Read More »

13

“ಭಾಗವತ ಏಳನೇ ಸ್ಕಂದ” (ಪ್ರಹ್ಲಾದ ಚರಿತ್ರೆ) ಉಪನ್ಯಾಸ

“ಅಧಿಕಮಾಸ ಜ್ಞಾನಯಜ್ಞ” ಪ್ರಯುಕ್ತ ಉತ್ತರಾದಿಮಠದಲ್ಲಿ ಮೈಸೂರು ರಾಮಚಂದ್ರಾಚಾರ್ಯರಿಂದ ಅಯೋಜಿಸಲ್ಪಟ್ಟು ತಾ-೨೪ ರಿಂದ ಆರಂಭಿಸಿ ಇವತ್ತಿನವರೆಗೆ ಏಳು ದಿನ ನಡೆದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ “ಭಾಗವತ ಏಳನೇ ಸ್ಕಂದ”(ಪ್ರಹ್ಲಾದ ಚರಿತ್ರೆ) ಉಪನ್ಯಾಸ ಕಾರ್ಯಕ್ರಮದ ಮಂಗಳೋತ್ಸವ ಇಂದು ನಡೆಯಿತು.ಈ ಸಂದರ್ಭದಲ್ಲಿ ಶ್ರೀಪಾದರು ಸತ್ಯನಾರಾಯಣಾಚಾರ್ಯರಿಂದ ರಚಿಸಲ್ಪಟ್ಟ “ದೈನಂದಿನ ಆಚರಣೆ” ಎಂಬ ಕೃತಿಯ ಐದನೇ ಬಾರಿಯ ಮುದ್ರಣವನ್ನು ಬಿಡುಗಡೆ ಮಾಡಿದರು. ಇದೇ ಸಮಯದಲ್ಲಿ ರಾಮಚಂದ್ರಾಚಾರ್ಯರು ಶ್ರೀ ಶ್ರೀ ಈಶಪ್ರಿಯತೀರ್ಥರಿಗೆ ಅವರ ಗುರುಗಳಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಭಾವಚಿತ್ರವನ್ನು ಕೊಡುಗೆಯಾಗಿ

“ಭಾಗವತ ಏಳನೇ ಸ್ಕಂದ” (ಪ್ರಹ್ಲಾದ ಚರಿತ್ರೆ) ಉಪನ್ಯಾಸ Read More »