News

Paravidya Sadana, palimaru, Vidyabhushana, Admaru Swamiji, Inauguration

Inauguration of Paravidya Sadana at Palimaru

ಪಲಿಮಾರು ಗ್ರಾಮದಲ್ಲಿರುವ ಪಲಿಮಾರು ಮಠದಲ್ಲಿ ತತ್ವಸಂಶೋಧನಾಸಂಸತ್ತಿನ ಕಾರ್ಯನಿರ್ವಹಣೆಗೆ ಬೇಕಾಗಿ ನೂತನವಾಗಿ ನಿರ್ಮಿಸಲಾದ “ಪರವಿದ್ಯಾಸದನ”ದಲ್ಲಿ ದಿ-4-3-2016ರಂದು ಅದಮಾರು ಮಠದ ಹಾಗು ಪಲಿಮಾರು ಮಠದ ಪಟ್ಟದ ದೇವರಾದ ಶ್ರೀಕಾಳಿಂಗಮರ್ದನಕೃಷ್ಣ ಹಾಗು ಶ್ರೀರಾಮಚಂದ್ರದೇವರ ಪೂಜೆಯನ್ನು ಅದಮಾರು ಮಠದ ಶ್ರೀ ಶ್ರೀವಿಶ್ವಪ್ರಿಯತೀರ್ಥಶ್ರೀಪಾದರು ಹಾಗು ಪಲಿಮಾರು ಮಠ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನೆರೆವೇರಿಸಿದರು. ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಸಂಸ್ಥೆಯಾದ ತತ್ವಸಂಶೋಧನಾಸಂಸತ್ತಿನ ಕಾರ್ಯಚಟುವಟಿಗೆ ಬೇಕಾಗಿ ನಿರ್ಮಿಸಿದ “ಪರವಿದ್ಯಾಸದನ” ಎಂಬ ನೂತನ ಕಟ್ಟಡವನ್ನು ಶ್ರೀಪಾದರು, ಅದಮಾರು ಮಠದ ಕಿರಿಯ ಶ್ರೀಪಾದರು, ಖ್ಯಾತ ಸಂಗೀತಗಾರಾದ ಶ್ರೀವಿದ್ಯಾಭೂಷಣರು ಹಾಗು […]

Inauguration of Paravidya Sadana at Palimaru Read More »

Purandarotasava, Tirumal, Tirupati, TTD, Visit to tirumala

Purandarotsava at Tirumala

ತಿರುಮಲ_ತಿರುಪತಿಯಲ್ಲಿ TTD ಹಾಗು ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಪುರಂದರದಾಸರ ಆರಾಧನಾ ಪ್ರಯುಕ್ತ “ಶ್ರೀಪುರಂದರೋತ್ಸವ” ದಲ್ಲಿ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ದಾಸಸಾಹಿತ್ಯದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಶ್ರೀಪಾದರು ಸನ್ಮಾನ ಮಾಡಿದರು.                  

Purandarotsava at Tirumala Read More »

Visit to Bichali (99), Appanacharya (100), Bichali (101), Tungabhadra (102)

Visit to Bichali

ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಮಿಳುನಾಡಿನ ರಾಯರ ಭಕ್ತನಾದ ಅಯ್ಯಪ್ಪ ಎನ್ನುವವರ ಸೇವಾರೂಪವಾಗಿ ಬಿಚ್ಚಾಲೆಯಲ್ಲಿರುವ ಉಗ್ರನರಸಿಂಹದೇವರಿಗೆ, ಪ್ರಾಣದೇವರಿಗೆ ಹಾಗು ಅಪ್ಪಣ್ಣಾಚಾರ್ಯರಿಂದ ಪ್ರತಿಷ್ಠಿತವಾದ ಶ್ರೀಗುರುರಾಘವೇಂದ್ರಸ್ವಾಮಿಗಳ ಏಕಶಿಲಾ ವೃಂದಾವನಕ್ಕೆ ವಾರ್ಷಿಕವಾಗಿ ನಡೆಯುವ ಪಂಚಾಮೃತಸಹಿತ ನಾನಾವಿಧದ ಫಲಗಳ “ಮಹಾಭಿಷೇಕ” ನಡೆಸಿದರು.                                    

Visit to Bichali Read More »

Mantralaya , Visit to Mantralaya, Raghavendra Swamy,  Subhudheendraru

ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ

ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಅದಮಾರು ಕಿರಿಯಶ್ರೀಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಿನ್ನೆ ರಾತ್ರಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ “ಗುರುಸಾರ್ವಭೌಮ”ರ ದರ್ಶನ ಪಡೆದರು. ಮಠಕ್ಕೆ ಆಗಮಿಸಿದ ಶ್ರೀಪಾದರೀರ್ವರನ್ನು ಮಂತ್ರಾಲಯ ಮಠದ ಶ್ರೀಪಾದರಾದ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಸ್ವಾಗತಿಸಿದರು.                    

ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ Read More »

Calender, 2016, Mysore, SitaRama

ಕ್ಯಾಲಂಡರ್ ಬಿಡುಗಡೆ – 2016

ಮೈಸೂರಿನ ನಿರ್ಮಾಣ್ ಪ್ರಮೋಟರ್ಸ್ ಇದರ ಮಾಲಿಕರಾದ ನಾಗೇಂದ್ರ ಹಾಗು ಗುರುಪ್ರಸಾದ್ ಇವರ ನೇತೃತ್ವದಲ್ಲಿ ರೂಪುಗೊಂಡ ಪಲಿಮಾರು ಮಠದ ಪರಂಪರೆಯಲ್ಲಿ ಪೂಜೆ ಸ್ವೀಕರಿಸುತ್ತಿರುವ ಶ್ರೀರಾಮದೇವರೇ ಮೊದಲಾದ ದೇವರ ಮೂರ್ತಿಗಳ ಛಾಯಾಚಿತ್ರಗಳನ್ನೊಳಗೊಂಡ ಕ್ಯಾಲಂಡರನ್ನು ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು.              

ಕ್ಯಾಲಂಡರ್ ಬಿಡುಗಡೆ – 2016 Read More »

Mahabharata, Pravacahana, Mysore, Mangala, Sabhaprava

ಮಹಾಭಾರತ- ಸಭಾಪರ್ವ ಪ್ರವಚನದ ಮಂಗಳ ಕಾರ್ಯಕ್ರಮ

ಕಳೆದ ಐದು ದಿನಗಳಿಂದ ಮೈಸೂರಿನ ಶ್ರೀಕೃಷ್ಣಧಾಮದಲ್ಲಿ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ನಡೆಯುತ್ತಿದ್ದ “ಮಹಾಭಾರತ- ಸಭಾಪರ್ವ” ಪ್ರವಚನದ ಮಂಗಳ ಕಾರ್ಯಕ್ರಮ ನಿನ್ನೆ ರಾತ್ರಿ ನಡೆಯಿತು.              

ಮಹಾಭಾರತ- ಸಭಾಪರ್ವ ಪ್ರವಚನದ ಮಂಗಳ ಕಾರ್ಯಕ್ರಮ Read More »