Update regarding Shri Purushottama Dhama construction at Jagannatha Puri
ಪುರುಷೋತ್ತಮ ಪುರಿ ಎನಿಸಿರುವ ಶ್ರೀಜಗನ್ನಾಥಪುರಿಯಲ್ಲಿ ಶ್ರೀಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಶಾಖಾಮಠವೊಂದನ್ನು ಸ್ಥಾಪಿಸಿ ಯಾತ್ರಿಕರಿಗೆ ಅನುಕೂಲಗಳನ್ನು ಒದಗಿಸಬೇಕೆಂದು ಸಂಕಲ್ಪಿಸಿದ್ದಾರೆ ಎಂಬುದು ಈಗ ಎಲ್ಲರಿಗೂ ವಿದಿತವಾಗಿರುವ ವಿಷಯ.
ಈ ನಿರ್ಮಾಣದ ಉದ್ದೇಶಕ್ಕಾಗಿ ಶ್ರೀಮಠದಿಂದ ಕಳೆದ ಬಾರಿಯ ಅಧಿಕಮಾಸದಲ್ಲಿ (2021)ರಲ್ಲಿ ದೇಣಿಗೆಯನ್ನು ಸಂಗ್ರಹಿಸಲು ಆರಂಭ ಮಾಡಲಾಗಿತ್ತು. ಇದಕ್ಕಾಗಿ ಜಗನ್ನಾಥಪುರಿಯಲ್ಲಿ ಮೊದಲೇ ಸ್ಥಳವೊಂದನ್ನು ಖರೀದಿಸಲಾಗಿತ್ತು. ಆದರೆ ಮುಂದೆ ನೈಸರ್ಗಿಕವಾಗಿ ಈ ಸ್ಥಳವು ದೊಡ್ಡ ಕಟ್ಟಡದ ನಿರ್ಮಾಣಕ್ಕೆ ಸೂಕ್ತವಲ್ಲ ಎಂದು ತಜ್ಞರ ಅಭಿಪ್ರಾಯ ಬಂದಿದ್ದರಿಂದ, ಆ ಸ್ಥಳವನ್ನು ಬಿಟ್ಟು ಮತ್ತೊಂದು ಸ್ಥಳವನ್ನು ಶ್ರೀಮಠವು ಖರೀದಿಸಿದೆ.
ಈ ಹೊಸ ಸ್ಥಳದಲ್ಲಿ ಶ್ರೀಪಾದರು ಭೂಮಿಪೂಜೆ ಮಾಡಿ ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ. 2024ನೇ ಆರ್ಥಿಕ ವರ್ಷದಿಂದ ಪುರೀ ಶಾಖಾಮಠದ ಕಟ್ಟಡ ನಿರ್ಮಾಣಕಾರ್ಯವು ಮೊದಲ್ಗೊಳ್ಳಲಿದೆ. 2026-27 ರ ಹೊತ್ತಿಗೆ ಯಾತ್ರಾರ್ಥಿಗಳಿಗೆ ಈ ಕಟ್ಟಡವು ಪ್ರಯೋಜನಕ್ಕೆ ದೊರಕಲಿದೆ.
At Purushotthama Puri,also known as Sri Jagannatha Puri, Sri Sri Vidyadheeshateertha Swamiji has intended to establish a branch of Palimaru Matha to facilitate pilgrims.
For the purpose of this construction, Sri Mata had started collecting donations during the previous Adhika masa (2021). A plot of land was previously purchased for this. However, as experts later opinioned that this place was not suitable to construct a big building for ecological reasons, Sri Matha has left that place and purchased another plot.
His Holiness has performed Bhoomi pooja and laid the foundation stone at this new site. The construction of this branch Matha at Puri will commence during the 2024 financial year. By 2026-27, this building will be available for use to pilgrims.